ನನ್ನ ದೇಶ – ದೆಸೆ – ಕಾಲ ಮತ್ತು ಹಣೆಬಾರ !

ಹೌದು. ಬರೆಯಬೇಕೆಂಬ ತುಡಿ(/ರಿ)ತವನ್ನು ತಡೆದುಕೊಳ್ಳುವುದು ಬಹಳ ಕಷ್ಟ. ಅದರಲ್ಲೂ ಸಿಕ್ಕಿದ್ದನ್ನೆಲ್ಲಾ ಬರೆಯಬೇಕೆಂಬ ಆಸೆ ಇದೆಯಲ್ಲ ಅದು ಮಹಾ ನೆವೆ. ನನಗೆ ಅಂಟಿಕೋಳ್ಳುವ ಹಲವು ಚಟಗಳಲ್ಲಿ ದೂರ ಹೋಗದೇ ಅಂಟಿಕೊಂಡು ತ್ರಾಸು ಕೊಡುತ್ತಿರುವ ಚಟ ಇದು ಒಂದು ಮಾತ್ರ. ಉಳಿದವುಗಳನ್ನು ನಾನು ಚಟವೆಂದು ಕರೆಯುವಂತಿಲ್ಲ ಸ್ವಾಮೀ. ಹೆಂಡತಿ ಮನೆಯಲ್ಲಿದ್ದಾಳೆ 🙂

ಒಂದು ಆಯಾಮವೇ ಇಲ್ಲದಂತೆ ಒಂದು ಬ್ಲಾಗನ್ನು ನಮೂದಿಸಬೇಕೆನ್ನುವ ಹಂಬಲ ಸುಮಾರು ಐದು ವರುಷದ ಹಿಂದೆ ಶುರುವಾದದ್ದು ಸುಳ್ಳಲ್ಲ. ಸುಮ್ಮನೆ ಕಾದೆ.. ಕಾರಣವಿಲ್ಲದೆ. ಈಗ – ಅದಕ್ಕಾಗಿ ಹೊಸತೊಂದು ಬ್ಲಾಗನ್ನು ಆರಂಭಿಸದೆ ಇದ್ದದ್ದನ್ನೇ ಬಳಸಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ. ಇದು ರಾಜಕೀಯ – ಅರಾಜಕೀಯ – ಪ್ರಸ್ತುತ – ಅಪ್ರಸ್ತುತ – ವಿಜ್ನಾನ – ಅವೈಜ್ನಾನಿಕ ಹೀಗೆ ಎಲ್ಲ ವಿಷಯಗಳ ಪ್ರಸವಸ್ಥಾನ! ನಿರ್ಭಂಧಗಳಿಲ್ಲ – ಕೇವಲ ಸ್ಪೆಲ್ಲಿಂಗ್ ಮಿಸ್ಟೇಕ್ ಗಳು ಮಾತ್ರ.

ಈ ಹಿಂದೆ , ನನ್ನ ಈ ಬ್ಲಾಗಿನಲ್ಲಿ ನಾನೇ ಕೆಲವೊಂದು ಷರತ್ತುಗಳನ್ನು ವಿಧಿಸಿಕೊಂಡಿದ್ದೆ. ಕೇವಲ ಚಿಕ್ಕಪುಟ್ಟ ಕಥೆ(!)ಗಳನ್ನು ಬರೆದುಕೊಂಡು ಸುಖವಾಗಿದ್ದೆ. ಆದರೆ ಚಟವೆಂದರೆ ಸುಮ್ಮನೆ ಕುಳಿತುಕೊಳ್ಳಲು ಬಿಡಬೇಕಲ್ಲ. ಮತ್ತೆ ನೆವೆ ಶುರುವಾಗಿಬಿಟ್ಟಿದೆ. ಸಿಕ್ಕಿದ್ದನ್ನೆಲ್ಲಾ ಬರೆಯುವ ನೆವ.

ಇವೆಲ್ಲ ಚಟವೆಂಬುದನ್ನು ಒಪ್ಪುವ ನಾನು “ಚಟಕ್ಕೆ” ಬರೆಯುತ್ತೇನೆ ಎಂದುಕೊಳ್ಳಬೇಡಿ ಎಂದು ವಿನಂತಿಸುತ್ತಾ…

ಗಜಮುಖದವಗೆ ಗಣಪಗೆ….

ಎಲ್ಲವನ್ನೂ ನೋಡುತ್ತ – ಸರಿಯಿಲ್ಲದುದನ್ನು ಪ್ರತಿಭಟಿಸಲು ಆಗದ ಜೀವಚ್ಚವಗಳಿಗೆ ನನ್ನ ಈ ಪೇಜ್ ಅನ್ನು ಬಲಿಕೊಡಲು ನಿರ್ಧರಿಸಿದ್ದೇನೆ !! ನಿಮಗೆ ಸ್ವಾಗತ ! ಲೇಖನಗಳು ಶೀಘ್ರದಲ್ಲಿ !

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s