ಟಿವಿ ಎಂಬ ರಾಹುವೂ – ಕೇಬಲ್‌ನವನೆಂಬ ಕೇತುವೂ

Say No To TVಟಿವಿ ಕೇಬಲ್-ನವನೊಟ್ಟಿಗೆ ಜಗಳವಾಯ್ತು ಮೊನ್ನೆ. ಆದದ್ದು ಒಳ್ಳೆದೇ ಅಯಿತು. ಹಾಗಾಗಿದ್ದಕ್ಕೆಯೋ ಏನೋ ಇವತ್ತು ಬ್ಲಾಗಿನಲ್ಲಿ ಬರೆಯುವ ನೆನಪಾಗಿದೆ. ಕಳೆದ ಕೆಲ ತಿಂಗಳಿಂದ ಏನನ್ನು ಬರೆಯಲಾರದಷ್ಟು ಜಾಡ್ಯವನ್ನು ಟಿವಿ ತಂದಿಟ್ಟದ್ದಂತು ನಿಜ. ಐಪಿ‌ಎಲ್ ಇದಕ್ಕೆ ನೇರ ಹೊಣೆ ಹೊರಬೇಕಷ್ಟೆ. ಸುಮರು ಇವತ್ತಿಗೆ ೫-೬ ತಿಂಗಳುಗಳೇ ಕಳೆದಿದೆ ಬ್ಲಾಗಿಸದೇ. ಇಲ್ಲಿ ಟಿವಿ ಒಂದು ನೆಪ ಮಾತ್ರ – ನನ್ನಲ್ಲಿನ ಆಲಸ್ಯದ ಪರಮೊನ್ನತಿಯೇ ಇದೆಲ್ಲದಕ್ಕೆ ಕಾರಣ ಎಂದು ಸರ್ವಜನಿಕವಾಗಿ ಹೇಗೆ ನಾನು ಬಿಚ್ಚಿಡಲಿ ನೀವೇ ಹೇಳಿ. ಒಟ್ಟಾರೆಯಾಗಿ ನನ್ನ ಆಲಸ್ಯವೋ ಅಥವಾ ಇನ್ನೇನೋ.. ಒಟ್ಟಾರೆ ಇತ್ತೀಚೆಗೆ ಓದುವುದು ಬರೆಯುವುದು ಕಡಿಮೆ ಆಗಿ ಆಗಿ ಪೂರ್ತಿ ಅನಕ್ಶರಸ್ಥನಾಗಿ ಬಿಟ್ಟಿದ್ದೆ.

ಮೊನ್ನೆ ನಮ್ಮ ಸಂಭಂಧಿಕರೊಬ್ಬರ ಮನೆಗೆ ತೀವ್ರ ಒತ್ತಾಯದ ತರುವಾಯ ಹೊಗಿದ್ದೆ. ಸಿಕ್ಕಸಿಕ್ಕಲ್ಲೆಲ್ಲಾ ಅವರದು ಅದೇ ಪುಕಾರು – ‘ಒಂದೇ ಊರಿನಲ್ಲಿದ್ದರೂ ಮನೆಗೆ ಬರೊಲ್ಲಾ’ ಎಂದು. ಊರಿಗೆ ಹೋದರೆ ಅಮ್ಮ ಅಪ್ಪನ ಹತ್ತಿರ ಕೂಡ ಇದೇ ಅಹವಾಲು; ಇವ ನಮ್ಮ ಮನೆಗೆ ಬರೋದೇ ಇಲ್ಲ. ನಾನೇನು ಮಡಲಿ – ಪುರುಸೊತ್ತು ಸಿಕ್ಕರೆ ಬೇಡದ್ದನ್ನು ಮನಸ್ಸು ಯೋಚಿಸುತ್ತದೆ ಎನ್ನುವ ಗಟ್ಟಿ ನಂಬಿಕೆ ನನ್ನದು – ಅದಕ್ಕೆ ಯಾವುದರಲ್ಲದರೂ ತೊಡಗಿಸಿಕೊಂಡು ನಿತ್ಯ ಸುಖ ಅನುಭವಿಸಬೇಕೆಂಬ ಹಂಬಲದಲ್ಲಿ ಕಳೆಯುವ ಜೀವಕ್ಕೆ ಈ ಪುಕ್ಸಟ್ಟೆ ‘ಬಾರೊ ನಮ್ಮ ಮನೆಗೆ’ ಬೇಡ ಅನಿಸಿದ್ದು ನಿಜವೇ. ಅಪ್ಪ ಕರೆದು ಸಂಬಂಧಿಕರು ಬೇಕು ಎಂದಿದ್ದಕ್ಕೆ ಅವರ ಮನೆಗೆ ಹೋಗಿದ್ದೆ. ಅದೊಂದೆರಡು ಸಲ ಸಂಭಂದಿಗಳಿಗಿಂತ ಸ್ನೇಹಿತರೇ ವಾಸಿ ಎಂದು ಹೇಳಿದ್ದು ಅಪ್ಪನೇ. ಅಂತು ಅವರ ಮನೆಗೆ ಹೋಗಿ ಕೂತದ್ದೇ ಆಸರಿಗೆ ಏನಾದರು ಬೇಕೆ ಎಂದು ಕೇಳಿದರು. ಚಹಾ ಬೇಡ- ಕಶಾಯ ಒಳ್ಳೆಯದು – ಕಶಾಯದ ಹಿಟ್ಟು ಇದೆಯೇ ಎಂದು ಕೇಳಿ ನಕ್ಕೆ. ಈ ಧಾರಾವಾಹಿ ಮುಗಿಯಲಿ ಮಾಡಿಕೊಡುತ್ತೇನೆ ಎಂದಾಗ ಅನಿವಾರ್ಯವಾಗಿ ಆ ಧಾರಾವಾಹಿಯ ಕಣ್ಣೀರಿನ ಧಾರೆಯಲ್ಲಿ ಭಾಗಿಯಾಗಬೇಕಾದ ಅನಿವಾರ್ಯ ನನಗೆ ಒದಗಿ ಬಂದದ್ದು ಸೌಭಾಗ್ಯವೇ ಸರಿ. ಧಾರಾವಹಿ ಮುಗಿದು ಇನ್ನೊಂದು ಶುರುವಾಗುವ ಮೊದಲು ನನ್ನ ಕಶಾಯ ಕೈ ಸೇರಿ ಮತ್ತೊಂದು ಧಾರಾವಾಹಿಯನ್ನು ನೋಡಲೇಬೇಕಾದ ಪರಿಸ್ಥಿತಿ ನನ್ನ ಪಾಲಿಗೆ. ಹೀಗೆ ಎರಡು ಧಾರಾವಹಿ ಮುಗಿಯುತ್ತಲೇ ನಾನು ಅದೇನೋ ಒಂದು ಕಾರಣ ಹೇಳಿ ಹೊರಬಂದುಬಿಟ್ಟೆ. ನಾನು ಅವರ ಮನೆಗೆ ಹೋದದ್ದು – ಧಾರಾವಾಹಿ ನೋಡಿ ಬಂದದ್ದು ಯಾರ ಎದುರಿಗೂ ಹೇಳದೇ ಅಮ್ಮನ ಹತ್ತಿರ – ನಾನು ಅವರ ಮನೆಗೆ ಹೋಗಿ ಬಂದೆ ಎಂದಾಗ ಅಮ್ಮ ನಿರಾಳ. ಇಂಥಹ ಸಂಭಂದಗಳು ಅದ್ಯಾಕೆ ಜೀವಂತವಿರಬೇಕು – ಕೇವಲ ಅವರ ಮನೆಯ ಸೂತಕ ಬಳಸಲು ಮಾತ್ರ ಸಂಭದಗಳು ಉಳಿದುಕೊಂಡು ಬಿಟ್ಟಿವೆಯೇ ಎಂದೆಲ್ಲಾ ಅನ್ನಿಸಿ ನನಗೆ ಕಿರಿ ಕಿರಿ ಆಗಲು ಶುರು ಆಯಿತು. ಇನ್ನು ಮೇಲೆ ಇದೆಲ್ಲ ಬೇಡವೇ ಬೇಡ ಎಂದೆಲ್ಲ ಅನ್ನಿಸಿಬಿಡುವಷ್ಟು ಹೇಸಿಗೆ ಹುಟ್ಟಿಬಿಟ್ಟಿತು ಆ ಒಂದು ಭೇಟಿ. ಮನುಷ್ಯ ಸಂಭಂದಗಳು ಸಾಯುತ್ತಿವೆಯಲ್ಲ ಇದಕ್ಕೇನು ಕಾರಣವಿರಬಹುದು ಎಂದೆಲ್ಲಾ ಒಬ್ಬನೇ ಕೂತಾಗ ವಿಚಾರ ಬರಲು ಶುರುವಾಯಿತು. ಮತ್ತೆ ಯಾವುದೋ ಕೆಲಸ ಕೈಗೆತ್ತಿಕೊಂಡೆ.

ಅದೇಕೋ ಏನೊ ಹೀಗೋಂದು ಮನಸ್ಸು ಮಾಡಿಬಿಟ್ಟೆನಲ್ಲ ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಕೇಬಲ್ಲಿನವನಿಗೆ ಹಿಗ್ಗಾ ಮುಗ್ಗಾ ಉಗಿದು ಅವನ ಹತ್ತಿರವೇ ಧಮಕಿ ಹಾಕಿಸಿಕೊಂಡು ಹೆದರಿದ್ದು ನಿಜ. ಆದರೆ ಕಳೆದೆರಡು ತಿಂಗಳಿನ ಬಾಕಿ ಉಳಿದದ್ದದ್ದು ಮತ್ತು ನಾನು ಅವನಿಗೆ ಕೊಟ್ಟ ಎಡ್‌ವಾನ್ಸು ಅವೆರಡು ಸರಿ ಅಯಿತೆಂದು ಅಂದುಕೊಂಡು ಅವನ ಧಮಕಿಗೆಲ್ಲ ಹೆದರದ ವಯಸ್ಸು ನಂದು ಎಂದಂದುಕೊಂಡು ಅವನ ಅಡ್ಡಾಕ್ಕೇ ಹೋಗಿ ಮತ್ತೆ ಉಗಿದೆ “ಧಮ್ಮಿದ್ದರೆ ಅದೇನ್ ಮಡ್ಕೋತೀಯೋ ಮಾಡ್ಕೊ, ನಂಗೂ ಗೊತ್ತು ನಿನ್ನನ್ನು ಹೇಗೆ ಹ್ಯಾಂಡಲ್ ಮಡಬೇಕು” ಎಂದು ಎಂದೆಲ್ಲಾ ಉಗಿದು ಬಂದ ನಂತರ ಅವನ ಮುಖ ಈಕಡೆ ನೋಡಿಲ್ಲ. ಮನೆಗೂ ಅವನಿಗೂ ಇದ್ದ ಏಕಮಾತ್ರ ಸಂಭಂದವಾದ ಕೇಬಲ್ ಅನ್ನು ಕಿತ್ತೊಗೆದುಬಿಟ್ಟೆ.  ಹೀಗೆಲ್ಲಾ ಅಗಿ ಡಿಶ್ ಟಿವಿ ಹಾಕಿಸಿಕೊಳ್ಳುವ ಹುನ್ನ್ನಾರ(!)ದಲ್ಲಿ ನಾಲ್ಕೆಂಟು ದಿನ ಕಳೆದಾಗಿದೆ. ಯಾವ ಪ್ಯಾಕೇಜು ಈ ಡಿಷ್‌ನವನಿಗಿಂತ ಕಡಿಮೆ ಆದೀತು ಎನ್ನುವುದನ್ನೆಲ್ಲ ಲೆಕ್ಕಚಾರ ಮಾಡಿ ಹುಡುಕಿ ಇಟ್ಟಾಗಿದೆ. ಈ ನಡುವೆ  ಟಿವಿ ಇಲ್ಲದೇ ಕಳೆಯಬಲ್ಲೆವು ಎಂದು ಮನೆಯವರೆಲ್ಲ ಒಮ್ಮತದ ಅಭಿಪ್ರಾಯಕ್ಕೆ ಬಂದದ್ದು ನನ್ನ ಹೀಗೊಂದು ಆವಿಷ್ಕಾರಕ್ಕೆ-ಕ್ರಾಂತಿಗೆ ನಾಂದಿ. ಟಿವಿ ಇಲ್ಲದಿದ್ದುದರಿಂದ ಅದೇನೋ ಒಂದು ತಾಂಡವ ಮೌನ ಮನೆಯಲ್ಲಿ ನೊಡಲು ಸಾಧ್ಯವಾಗುತ್ತಿದೆ. ಈಗೀಗ ಎಲ್ಲರೂ ಊಟಮಡುತ್ತ ಕೆಲಸದ – ಕಾಲೇಜಿನ ಇನ್ನು ಏನೋನೋ ಕುಶಲೋಪರಿಯನ್ನ ಪರಸ್ಪರ ಮಾತಾಡಲು ಸಾಧ್ಯವಾಗಿದೆ. ಮನೆಯಲ್ಲಿ ಊಟ ನೆಮ್ಮದಿಯನ್ನು ತಂದಿದೆ. ಮೋದಲು ಟಿವಿ೯ ರ ವಾರ್ತೆಯೋ ಅಥವಾ ಇನ್ಯಾವುದೋ ಧಾರವಾಹಿಯನ್ನೋ – ಕಣ್ಣೀರನ್ನೋ ನೋಡುತ್ತ ಅದರ ಕಥೆಯಬಗ್ಗೆಯೇ ಮನೆಯವರೆಲ್ಲ ಮತಾಡಿ ಚರ್ಚಿಸುತ್ತ ಆ ಪಾತ್ರ ಮಾಡಿದ ಕೆಳಸ ಸರಿಯೋ ತಪ್ಪೋ ಇತ್ಯಾದಿ ಉಪಯೊಗಕ್ಕೆ ಬರದ ಮೂರುಕಾಸಿನ ವಾದ ಮಂಡಿಸುತ್ತ ನಮ್ಮ ನಮ್ಮ ಸ್ವಂತಿಕೆ- ನಾವು ಮಾಡಿದ ತಪ್ಪು ಇವ್ಯಾವುದನ್ನೂ ಒಂದಿನಿತೂ ಯೋಚಿಸದೇ ದಿನ ದೂಡಿತ್ತುದ್ದೆವಲ್ಲ.. ಒಟ್ಟರೆಯಾಗಿ ಧಾರಾವಾಹಿ ಬಂದು ಸ್ವಂತಕ್ಕೆ – ಸಮಯಲ್ಲದಂತೆ ಮಾಡಿದ್ದಂತು ಶತ ಸಿದ್ಧ. ಈ ಟಿವಿ  ನಿಜವಾದ ಧರಿಧ್ರ ಅಂತ ಗೊತ್ತಗಿದ್ದು ನನಗೆ ಹೀಗೆಲ್ಲಾ ಆದ ನಂತರ.

ಒಡೆಯಿರಿ ಟೀವಿ ; ಮನೆಯನ್ನು ಒಡೆಯುವ ಮುನ್ನ - ಅದ್ಯಾರೋ ಬಹಳ ಹಿಂದೆಯೇ ಹೇಳಿದ್ದರು..
ಒಡೆಯಿರಿ ಟೀವಿ ; ಮನೆಯನ್ನು ಒಡೆಯುವ ಮುನ್ನ - ಅದ್ಯಾರೋ ಬಹಳ ಹಿಂದೆಯೇ ಹೇಳಿದ್ದರು..

ಈಗ ನಮ್ಮ ಟಿವಿ ಮನೆಯ ಮೂಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದೆ. ನಾನು ಮನೆಗೆ ಬಂದ ನಂತರ ಅಡಿಗೆ ಮಾಡಿ ಸಿಕ್ಕ ಸಮಯದಲ್ಲಿ ಪುಸ್ತಕ ಓದಿಕೊಳ್ಳುತ್ತೇನೆ. ಬ್ಲಾಗ್ ಓದುತ್ತೇನೆ. ತಮ್ಮ ಮತ್ತು ನನ್ನ ಬಾವ ಕೂಡ ಯವುದಾದರೊಂದು ಪುಸ್ತಕ ಕೈಗೆತ್ತಿಕೊಳ್ಳಲು ಶುರು ಮಾಡಿದ್ದಾರೆ. ಟಿವಿಗೆ ವಿಶ್ರಾಂತಿ – ಟಿವಿ ಇಲ್ಲದೇ ಎಲ್ಲ ಶಾಂತಿ. ಎಲ್ಲ ಓಟ್ಟಿಗೆ ಕೂತು ಊಟ ಮಾಡುತ್ತೇವೆ-ಹರಟುತ್ತೇವೆ. ವಾರ್ತೆಗೆ ವಾತಾ-ಪತ್ರಿಕೆಯನ್ನು(ನಿವ್ಸ್ ಪೇಪರ್) ಓದುತ್ತೇವೆ. ಎಲ್ಲ ಒಮ್ಮೆಲೇ ಸರಿ ಆದ ಭಾವ. ನೆಂಟರು ಮನೆಗೆ ಬಂದರೆ ಪೂರ್ತಿ ಸಮಯ ಅವರಿಗೇ ಮೀಸಲು. ಅವರು ಹೋಗುವಾಗ ಮತ್ತೆ ಬರುವ ಮನಸ್ಸಿಟ್ಟುಕೊಂಡು ಹೋಗುತ್ತಾರೆ ಎಂಬುದು ಅವರ ಬೀಳ್ಕೊಡುವ ಸಮಯದ ನಗು ಭರವಸೆ ನೀಡುತ್ತದೆ. ಒಟ್ಟಾರೆಯಾಗಿ ಎಲ್ಲ ಮನುಷ್ಯ ಸಂಭಂದಗಳು ಮತ್ತೆ ರೆಕ್ಕೆ ಬಿಚ್ಚಿಕೊಳ್ಳುತ್ತಿವೆ. ಹಾ ನೀವೂ ಸಧ್ಯವಾದರೆ ಅಥವಾ ಸಾಧ್ಯ ಮಾಡಿಕೋಂಡು ಒಂದಿಷ್ಟು ದಿನ ಕಡಿಮೆ ಅಂದರೂ ಒಂದು ತಿಂಗಳು ಟೀವಿಯಕ್ಕು ಮೂಲೆಗೆ ಸೇರಿಸಿ – ನಿಜವಾಗಿ ಹೇಳುತ್ತೇನೆ ಮನೆಯಲ್ಲಿ ಚಿಕ್ಕಪುಟ್ಟ ಕಿರಿಕಿರಿಗಳು ತನ್ನಿಂತಾನೇ ದೂರವಾಗುತ್ತದೆ – ಸಂಭಂದಗಳು ಮತ್ತೆ ಚಿಗುರೊಡೆಯುತ್ತವೆ. ಹಮ್.. ನೀವು ನನ್ನಂತೆ ಕೇಬಲ್ಲಿನ ಹುಡುಗನ ಹತ್ತಿರ ಜಗಳವಾಡಬೇಕಿಲ್ಲ.. ಸುಮ್ಮನೆ ಒಂದು ತಿಂಗಳು ಬೇಡ ಎಂದು ಹೇಳಿ ಕಳಿಸಿಬಿಡಿ. ಹೆಂಡತಿಯ ಹತ್ತಿರ ಬೈಸಿಕೊಂಡರೂ ಸ್ವಲ್ಪ ದಿನದಲ್ಲಿ ವ್ಯತ್ಯಾಸ ಖಂಡಿತ. ನನಗೆ ಇದೆಲ್ಲವನ್ನು ಪದೆ ಪದೆ ಹಂಚಿಕೊಳ್ಳಬೇಕೆಂಬ ಹಂಬಲ ಜಾಸ್ತಿಯಾಗಿ ಈ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ನಿಜವಾಗಿ ಇಂಥಹ ಬರಹಗಳಿಗೆ ಇಲ್ಲಿ(ನನ್ನ ಬ್ಲಾಗಿನಲ್ಲಿ) ಜಾಗವಿಲ್ಲವೆಂಬ ನನ್ನದೇ ನಿರ್ಭಂದವನ್ನು ಸಡಿಲಿಸಿ ಬರೆದು ಹಾಕಿದ್ದೇನೆ ಕಾರಣ ಇಷ್ಟೇ-ಮತ್ತೆ ಮನುಷ್ಯ – ಸಂಭಂದಗಳಿಂದ ಕೂಡಿಸಲ್ಪಡಲಿ..ಮನುಷ್ಯ ಸಂಭಂದದ ವಿಚಾರದಲ್ಲಿ ಮಾತ್ರ ಪಾಷ್ಚಾತ್ಯರು ಆದರ್ಶರಲ್ಲ ಎಂಬುದು ನೆನಪಿರಲಿ- ಅವರಂತೆ ನಾವಲ್ಲ ॒

ಕೊನೆಯಲ್ಲಿ ಉಪಸಂಹಾರ – ಟಿವಿ ಎಂಬ ರಾಹುವೂ – ಕೇಬಲ್‌ನವನೆಂಬ ಕೇತುವೂ ನನಗೆ ಮತ್ತೆ ನನ್ನ ಸಂಭಂದಗಳನ್ನು ಪುನರ್ಕಲ್ಪಿಸಿಕೊಟ್ಟದ್ದಕ್ಕೆ ಥ್ಯಾಂಕ್ಸ್.. ಇದಕ್ಕಿಂತ ಹೆಚ್ಚೇನು ಹೇಳಲಿ॒

– ಮೂರೂರು – ವಯಸ್ಸು ೨೩

Advertisements

2 thoughts on “ಟಿವಿ ಎಂಬ ರಾಹುವೂ – ಕೇಬಲ್‌ನವನೆಂಬ ಕೇತುವೂ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s