____ !!?!

ಈ ದೇಶದಲ್ಲಿ ಒಂದೋ ಹಗರಣ ಇಲ್ಲವೇ ಒಂದು ಬಾಂಬ್ ಸ್ಪೋಟ ಸದಾ ಸುದ್ದಿಯಲ್ಲಿರುತ್ತದೆ. ಒಂದಕ್ಕೊಂದು ಕಾಯುತ್ತಿರುವಂತೆ, ಪೈಪೋಟಿಯಲ್ಲಿ. ಹಿಂದೆ ಹಗರಣಗಳೇ ಆಗಿಲ್ಲವೆಂತಲ್ಲ, ಹಗರಣ ಅಂದೂ ಇಂದೂ , ಹೀಗೆ ಜನ ಸುಮ್ಮನೇ ಕೂತರೆ ಎಂದೆಂದೂ ಹಗರಣವೇ ಗತಿ. ಭಾರತ ಘಾನಾ ದೇಶವಾಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಅಂದ ಹಾಗೆ ಘಾನಾ ಸ್ಕ್ಯಾಮ್(ಹಗರಣ)ಗಳ ದೇಶ ಎಂದೇ ಕರೆಯಲ್ಪಡುತ್ತದೆ. ಹುಚ್ಚಿ ಮದುವೆಯಲ್ಲಿ ಮೊದಲು ಉಂಡವನೇ ಜಾಣವೆಂಬಂತೆ, ಇಂದು ನಮ್ಮ ರಾಜಕಾರಣಿಗಳು ಒಂದು ಹಗರಣ ಮಾಡಿ ಕೂತುಬಿಡುತ್ತಿರುವುದನ್ನು ಜನ ಒಪ್ಪಿಕೊಳ್ಳುತ್ತಿರುವ ಮನೋಭಾವ ವಿಪರ್ಯಾಸವೇ. ಒಂದು ಕೋಟಿಯಷ್ಟು ಬೃಹತ್ ಮೊತ್ತ ಹಗರಣಗಳ ವಿಷಯಕ್ಕಿಳಿದರೆ ಒಂದು ಮೊತ್ತವೇ ಅಲ್ಲವೆಂಬ ಮನೋಭಾವ. ಅದರಲ್ಲೂ ಈ 2G Spectrum ಮತ್ತು ಗಣಿ ಹಗರಣದ ಮುಂದೆ ಚಿಕ್ಕಪುಟ್ಟ ಬೆರಳೆಣಿಕೆಯ ಕೋಟಿಗಳೆಲ್ಲ ಲೆಕ್ಕವೇ ಅಲ್ಲವೆಂಬ ಅಸಡ್ಡೆ ಜನರಲ್ಲಿ ಒಂದು ಜಡ್ಡು ತಂದು ಹಾಕಿಬಿಟ್ಟಿದೆ. ಅತ್ತ ಲೋಕ್ ಪಾಲ್ ಬಿಲ್ ಕೂಡ ನಮಗೆ ಏನೆಂದೇ ಗೊತ್ತಿಲ್ಲದಿದ್ದರೂ ಅದೇನೋ ಬ್ರಷ್ಟಾಚಾರದ ವಿರುದ್ಧ ಎಂದು ಎಲ್ಲರೂ ಅದಕ್ಕಾಗಿ ಪಣತೊಟ್ಟು ನಿಂತೆವು. ಅದು ಸದನದಲ್ಲಿ ಪಾಸ್ ಕೂಡ ಆಯಿತು. ಕಾಂಗ್ರೆಸ್ ಕಣ್ಣೊರೆಸುವ ತಂತ್ರ ಫಲಕಾರಿಯಾಯಿತು. ಅದರಲ್ಲೇನಿದೆ, ಅಣ್ಣಾ ಹಜಾರೆ ಕೇಳಿದ್ದೇನು ಆದರೆ ಕೊನೆಗೆ ಅಂಗೀಕಾರವಾದ ಮಸೂದೆಯೇನು ಎಂಬುದು ಜನಸಮಾನ್ಯನಿಗೆ ತಿಳಿದಿರದಿದ್ದುದು ಕಂಗ್ರೆಸ್ಸಿಗರ, ಪ್ರಧಾನಿಯ ಬಂಡವಾಳ. ಮತ್ತೆ ಸುಪ್ರೀಮ್ ಕೋರ್ಟ್ ಕೂಡ ಅಣ್ಣನಿಗೆ ಉಪವಾಸ ಕೂರಲು ದೆಹಲಿಯಲ್ಲಿ ಅವಕಾಶ ನಿರಾಕರಿಸಿ ಭಾರತ ಸರಕಾರೀ ಕಳ್ಳರ ಸಂಪೂರ್ಣ ಬೆಂಬಲಕ್ಕೆ ನಿಂತಂತಿದೆ.

ಒಟ್ಟಾರೆಯಾಗಿ ಮತ್ತೆ ಮತ್ತೆ ನಮ್ಮೆಲ್ಲರ ತಾಳ್ಮೆಯನ್ನು ಜನ ನಾಯಕರು ಕೆಣಕುತ್ತಲೇ ಇದ್ದಾರೆ. ಜನ ಮಾತ್ರ ಒಂದು ಅಸಹಾಯಕ ಸ್ಥಿತಿಯಲ್ಲಿ ಸಿಕ್ಕಸಿಕ್ಕಲ್ಲಿ ವ್ಯವಸ್ಥೆಯ ಬಗ್ಗೆ ಬೈದುಕೊಳ್ಳುತ್ತ ಆಯಕರ ಕಟ್ಟುತ್ತ ಜೀವನ ಸಾಗಿಸುತ್ತಿದ್ದಾರೆ. ಟ್ವಿಟರಿನಲ್ಲಿ ಹಲವರು ತಮ್ಮ ವ್ಯಾಕುಲತೆಯನ್ನು ಹೊರಹಾಕಿದರೆ ಇನ್ನು ಹಲವರು ತಮ್ಮ ಅಸಹಾಯಕತೆಯನ್ನು ಹೊರಹಾಕುತ್ತಾರೆ. ಇದು ಯಾವುದೇ ಹಗರಣ ಅಥವಾ ಬಾಂಬ್ ಸ್ಪೋಟವಾದಾಗ ಕಂಡುಬರುವಂಥದ್ದು ಸಮಾನ್ಯವೇನೋ ಎಂದೆನಿಸಿಬಿಡುವುದು. ಜನ ಸಾಮಾನ್ಯನಿಗೆ ಎಲ್ಲವೂ ಸಮಾನ್ಯವೆಂದೇ ಪರಿಗಣಿಸಬೇಕು ನಮ್ಮ ದೇಶದಲ್ಲಿ. ವಿಶೇಷವಾಗಿ ನನಗೆ ನಮ್ಮ ದೇಶವನ್ನು ಬಯ್ದುಕೊಳ್ಳಲು ಮನಸ್ಸಿಲ್ಲ. ಆದರೆ ಒಮ್ಮೊಮ್ಮೆ frustration ಮಿತಿ ಮೀರುತ್ತದೆ. ಇಷ್ಟೆಲ್ಲವಾದರೂ ಜನರು ಯಾಕೆ ಬೀದಿಗಿಳಿಯುತ್ತಿಲ್ಲ ಎಂಬುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ.

ಅದೆಲ್ಲ ಬಿಡಿ. ಇವೆಲ್ಲ ನನ್ನ ಪ್ರಶ್ನೆಯೇ ಅಲ್ಲ. ನನ್ನ ಪ್ರಶ್ನೆ ನೇರ –
೧. ಹಗರಣಗಳಲ್ಲಿ ನುಂಗಿ ಹಾಕಿದ ಹಣಗಳನ್ನು ಯಾಕೆ ಅಷ್ಟು ಸಲೀಸಾಗಿ ಈ ವ್ಯವಸ್ಥೆಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗದು ?
೨.ಒಬ್ಬ ಲಂಚ ತೆಗೆದುಕೊಂಡ ಅಥವಾ ಹಗರಣದಲ್ಲಿ ಭಾಗಿಯಾಗಿ ದುಡ್ಡು ಹೊಡೆದವ ಅದರಲ್ಲಿ ಒಂದಿಷ್ಟು ಹಣವನ್ನು ಮೋಜು ಮಾಡಿ ಅಥವಾ ಇನ್ನೇನೋ ಮಾಡಿ ಉಡಾಯಿಸಿರುತ್ತನಲ್ಲಾ, ಅದನ್ನು ಹೇಗೆ ಹಿಂದಕ್ಕೆ ಸರಕಾರ ಪಡೆಯುತ್ತದೆ?
೩. ಕದ್ದ ಮಾಲನ್ನು ಕಳ್ಳ ಯಾವತ್ತೂ ಅರ್ಧ ರೇಟಿಗೆ ಮಾರಿಕೊಳ್ಳುತ್ತಾನೆ ಎಂಬುದು ಸಾರ್ವಕಾಲಿಕ. ಗಣಿ ಹಗರಣದಲ್ಲಿ ಗಣಿಗೆ ತಕ್ಕ ಮೊತ್ತ ಸರಕಾರಕ್ಕಲ್ಲದಿದ್ದರೂ at least ನಮ್ಮ ದೇಶಕ್ಕೆ ತಲುಪಿದೆಯೋ ಅಥವಾ ಕದ್ದ ಮಾಲಿನಂತೆ ಗಣಿಗಳ್ಳರು ಅದನ್ನೂ ಸಿಕ್ಕ ರೇಟಿಗೆ ಮಾರಿದ್ದಾರೋ? ಹಾಗೊಮ್ಮೆಯಾದರೆ ಅದು ನಿಜಕ್ಕೂ ದೇಶಕ್ಕೆ ಲಾಸ್, ಇಲ್ಲದಿದ್ದರೆ at least ಹಣ ಭಾರತದಲ್ಲಿಯೇ ಇದೆ ಎಂದಾದರೂ ಸಮಾಧಾನ ಮಾಡಿಕೊಳ್ಳಬಹುದು.
೪.ಸ್ವಿಸ್ ಬ್ಯಾಂಕಿನಲ್ಲಿ ಕೋಟ್ಯಾನು ಕೋಟಿ ಹಣವನ್ನು ಇಡುತ್ತಾರೆ, ಆದರೆ ಅದನ್ನು ಅಲ್ಲಿಗೆ ಹೇಗೆ ಸಾಗಿಸಲಾಗುತ್ತದೆ ಎಂಬುದು ನನಗೆ ಇನ್ನೂ ಅರ್ಥವಾಗಿಲ್ಲ.
೫……. ಯಾಕೆ ನನಗೆ ಪದೇ ಪದೇ ಈ ಹಾಡು ನೆನ್ಪಾಗ್ತ ಇರೊತ್ತೆ ???? –“ಈ ದೇಶದ್ ಕಥೆ ಇಷ್ಟೇ ಕಣಮ್ಮೋ, ಇಲ್ ಚಿಂತೆ ಮಾಡಿ ಲಾಭಾ ಇಲ್ಲಮ್ಮೋ”…

ಮತ್ತೇನ್ ಹೆಳ್ಲಿ…?
ನೀವು ಹಿಂದಿಯ wednesday ಎಂಬ ಚಲನಚಿತ್ರವನ್ನು ನೋಡಿರಬಹುದು, ಇಲ್ಲವಾದರೆ ಒಮ್ಮೆ ನೋಡಲೇ ಬೇಕಾದ ಚಿತ್ರವದು.

(ಕ್ಷಮಿಸಿ , ಇದು ಅಪೂರ್ಣ ಲೇಖನ.. ರಾಜಕೀಯದ ಬಗ್ಗೆ ಬರೆಯೋಕೆ ಬೇಜಾರಾಗಿ ಇದನ್ನು ಇಲ್ಲಿಗೇ ನಿಲ್ಲಿಸುತ್ತಿದ್ದೇನೆ)

Advertisements

One thought on “____ !!?!

  1. Yes Shishir, you have shot one more bullet. It has definitely pierced through the conscience of many people. We need good leaders. People can elect good leaders when their intention is clear. They are to be educated to express what they need and make it a reality.

    To put it differently we need to expand our mind. Come out of the shell of selfishness. We are born once in this life and die once. There is an urgency for us to transform ourselves not only for our sake but for the sake of entire humanity. When there is a small leakage in the roof of our house we are not very much worried. Though it is very serious we can postpone the corrective measure for some days. If there is a smallest leakage in a submarine what would be the condition of people inside !

    We have to come out of the slumber, have and show clear intention.

    Rajaram Hegde

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s