ನಾವು ತಪ್ಪಿಬೀಳುವುದೇ ಅಲ್ಲಿ.. ಇನ್ನಾದರೂ…

ನಾವು ತಪ್ಪಿಬೀಳುವುದೇ ಅಲ್ಲಿ. ಭಾರತೀಯರ ಬಗ್ಗೆ ಅಲ್ಲಿ ಇಲ್ಲಿ ವಿದೇಶೀ ಪತ್ರಿಕೆಗಳು ಬರೆದುಕೊಳ್ಳುವುದೂ ಇದನ್ನೇ. ಯಾವುದೇ ದುರಂತವನ್ನು ಸರಿಯಾಗಿ ಎದುರಿಸಲು ನಾವು ಸನ್ನದ್ಧರಾಗಿರುವುದಿಲ್ಲ. ಬೆಂಕಿ ಬಿದ್ದಾಗ ಬಾವಿ ತೋಡಿಕೊಂಡರಾಯಿತು ಎನ್ನುವ ಒಂದು ಅಖಂಡ ಆಲಸ್ಯ. ಇದೇ ಸಮಸ್ಯೆ ಇಂದು ನಮ್ಮಲ್ಲಿ ಮಾರ್ಗ ಮಧ್ಯೆ ಬಸ್ ಹಾಳಾದಾಗಿನಿಂದ ಹಿಡಿದು , ಪದೇ ಪದೆ ಆಂತರಿಕ ಭಯೊತ್ಪಾದನಾ ದಾಳಿಯಾದಾಗಲೆಲ್ಲ ಎದ್ದು ಕಾಣುತ್ತದೆ. ನಮ್ಮಲ್ಲಿ ಒಂದು ದೊಡ್ಡ ಮಳೆ ಬಂದರೆ ಸರ್ವಂ ಜಲಮಯಂ. ದೊಡ್ಡ ಕಟ್ಟಡಕ್ಕೆ ಬೆಂಕಿಬಿದ್ದರೆ ಜನ ಕಂಗಾಲಾಗಿ ಮೇಲಿಂದ ಕೆಳಕ್ಕೆ ಹಾರಿಕೊಳ್ಳುವ ಅವಸ್ಥೆ.

ಇಲ್ಲೆಲ್ಲಾ, ಒಂದು ಮುನ್ನೆಚ್ಚರಿಕೆಯ ಕೊರತೆ ಎದ್ದು ಕಾಣುತ್ತದೆ. ಇಂಥಹ ದುರ್ಘಟನೆ ಆದಾಗಲೆಲ್ಲ ಅದನ್ನು ಅಧಿಕಾರಿಗಳು , ರಾಜಕಾರಣಿಗಳು ಪ್ರತೀಸಲವೂ ಒಪ್ಪಿಕೊಳ್ಳುತ್ತಾರೆ, ಮತ್ತೆ ಹೀಗಾಗಲು ಅವಕಾಶ ಕೊಡುವುದಿಲ್ಲ ಎಂದು ಹೇಳಿಕೆ ಕೊಡುತ್ತಾರೆ. ಆದರೆ ಪುನಹ ಇಂಥಹ ಅವಘಡವಾದಾಗ ಮತ್ತೆ ಎಲ್ಲಾ ಕಕ್ಕಾಬಿಕ್ಕಿ. ಘಟನೆಯ ಕಾರಣ ಹುಡುಕುತ್ತೇವೆಯೇ ವಿನಹ ಘಟನೆಯ ಮೂಲಕ್ಕೆ ನಾವು ತಲುಪುವುದೇ ಇಲ್ಲ.

ನಮ್ಮ ರಾಜಕಾರಣಿಗಳಿಗೆ ಇದ್ದದ್ದು ನಡೆಸಿಕೊಂಡು ಹೋದರಾಯಿತು ಎನ್ನುವ ಹಂಬಲ. ಯಾವುದೇ rapid ಬದಲಾವಣೆ ನಮಗೆ ತಕ್ಷಣ ಒಪ್ಪಿಗೆಯಿಲ್ಲ. ಇದಕ್ಕೆ ಮೇಲ್ಸ್ಥರದಲ್ಲಿ ಜಾಂಡಾ ಹೂಡಿರುವ ಹೆಬ್ಬೆಟ್ಟುಗಳೂ ಮೂಲ ಕಾರಣವಿರಬಹುದು ಅಥವಾ ಒಳ್ಳೆಯದನ್ನು ಮಾಡಲು ಹೋಗಿ ಹೊಸ ತಪ್ಪನ್ನು ಮಾಡಿಕೊಳ್ಳಬಾರದು ಎಂಬ riskless adminstrationನ ಜಾಣತನ(!) ನಮ್ಮ ರಾಜಕಾರಣಿಗಳಲ್ಲಿರಬಹುದು. ನಮ್ಮಲ್ಲಿ ಹೆಚ್ಚಿನ ರಾಜಕಾರಣಿಗಳು ತಾವು busy ಇದ್ದೇವೆ ಎಂದು ತೋರಿಸಿಕೊಳ್ಳುವುದರಲ್ಲೇ busy ಆಗಿರುತ್ತಾರೆ. ಹೆಚ್ಚಿನವರು ’ಊಟಕೆ ಹಾಜರ್’ ಮನೋಭಾವದವರು, ಯಾವುದೇ ಉದ್ಘಾಟನಾ ಸಮಾರಂಭಕ್ಕೆ ಹಾಜರ್! ಒಬ್ಬ ಸರಿಯಾಗಿ ಕೆಲಸ ಮಾಡುವ MLAಗೆ ದಿನಕ್ಕೆ ಸ್ವಂತಕ್ಕೆ ೬ ತಾಸು ನಿದ್ರೆ ಸಿಕ್ಕರೆ ಅದೇ ದೊಡ್ಡದು, ಅಷ್ಟು ಕೆಲಸವಿರುತ್ತದೆ, ಮಾಡಿದರೆ! ಅಂಥವರು ಇಲ್ಲವೆಂದಲ್ಲ, ನಾನೆ ಕಣ್ಣಾರೆ ಹತ್ತಿರದಿಂದ ಕಂಡ ಒಬ್ಬ ಶಾಸಕರಿದ್ದಾರೆ. ಆದರೆ ನಮ್ಮ ಹಣೆಬರಹಕ್ಕೆ ಹೆಚ್ಚಿನವರು ದೇವಸ್ಥಾನ ನೋಡಿಕೊಂಡು, ಉದ್ಘಾಟನೆ ಮಾಡಿಕೊಂಡು ಅದೇ ನಮ್ಮ ಕೆಲಸ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುತ್ತಾರೆ. ಜನಕ್ಕೆ ಭೂದಿ!

ಇರುವ system ಅನ್ನೇ ನೋಡಿಕೊಂಡು ಹೋಗುವುದು ಆಡಳಿತದಲ್ಲಿ ಜಾಡ್ಯತೆಯನ್ನು ಎಳೆದು ತರುತ್ತದೆ. ಅದನ್ನು progressive ಆಡಳಿತವೆನ್ನದೇ regular maintanance work ಅನ್ನಬಹುದು. ನಾವು ತಪ್ಪುತ್ತಿರುವುದು ಇಲ್ಲಿ. ಜಗತ್ತು ಸತತವಾಗಿ ಬೆಳೆಯುತ್ತಿದೆ. ಜನರು ಬೌಧ್ಧಿಕವಾಗಿ ಬೆಳೆಯುತ್ತಿದ್ದಾರೆ. ರಾಜಕಾರಣಿಯಾದವನು ಒಂದೇ ಒಂದು outdated ಮತನ್ನಾಡಿದರೂ ಜನರ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಈಗಿತ್ತಲಾಗೆ ಇಂಟರ್ನೆಟ್ ನ ಬಳಕೆ exponentially ಹೆಚ್ಚುತ್ತಿರುವುದರಿಂದ ಜನಕ್ಕೆ ಜಗತ್ತಿನ ಬೆಳವಣಿಗೆಗೆ ಸುಲಭವಾಗಿ access ಸಿಗುತ್ತಲಿದೆ. ಜನ ಓದುತ್ತಿದ್ದಾರೆ. ಬದಲಾವಣೆ ಬಯಸುತ್ತಿದ್ದಾರೆ. twitter ಜಗತ್ತಿನ ಯಾವುದೇ ಮೂಲೆಯ ಸುದ್ಧಿಯನ್ನು ಕ್ಷಣಾರ್ಧದಲ್ಲಿ ನಮಗೆ ತಲುಪಿಸುತ್ತದೆ (ಕೆಲವು twitter ಹೊಂದಿರುವವರಂತೂ ಸ್ವಂತ ಪತ್ರಿಕೆಯನ್ನು ನಡೆಸುತ್ತಿರುವಂತೆ ಭಾಸವಾಗುತ್ತದೆ!). ಇಂಟರ್ನೆಟ್ ಮತ್ತು plastic/cashless moneyಯ ಬಳಕೆ ನಮ್ಮನ್ನು ಹೊಸದೊಂದು ಯುಗಕ್ಕೆ ಗೊತ್ತಿಲ್ಲದೇ ಅಣಿಯಾಗಿಸುತ್ತಿದೆ. ಬಹುತೇಕ ಬ್ಯಾಂಕ್ ಗಳು ಮತ್ತು ಸರಕಾರಿ ಸಂಸ್ಥೆ, ಕಾರ್ಯಾಲಯಗಳು ಈಗಾಗಲೇ ಕಂಪ್ಯೂಟರೀಕೃತವಾಗಿವೆ ಅಥವಾ ಆಗುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಆದರೆ,

ನಾವು ಭಾರತೀಯರು ಪ್ರತಿಯೊಂದನ್ನೂ ಕಡಿಮೆ ಖರ್ಚಿನಲ್ಲಿ ಮಾಡಿ ಮುಗಿಸಲು ಹಪಹಪಿಸುವ ಮಂದಿ. ಅರ್ಧ ಕಾಸಿಗೆ ಸಿಗುವ ಮುಗ್ಗಿದ ಜೋಳವನ್ನೇ ಹೆಚ್ಚು ಇಷ್ಟಪಡುವವರು. ’ಸ್ವಲ್ಪ adjust ಮಾಡಿಕೊಳ್ಳೋಣ ಬಿಡಿ’ ಎಂಬ ಮನೋಭಾವದವರು. ಒಪ್ಪಿಕೊಳ್ಳೋಣ. ಈ ಬುದ್ಧಿ ಹಲವುಕಡೆ click ಆಗಿ ಹೊಟ್ಟೆ ತುಂಬಿಸಿಕೊಳ್ಳಬಹುದು. ಆದರೆ , ಇದೇ ಅಗ್ಗದ ಬುದ್ದಿ ನಮಗೆ ಒಂದು ಮಹಾ risk ಅನ್ನು ತಂದಿಡುವ ಎಲ್ಲ ಸಾಧ್ಯತೆಗಳು ಈಗ ಎದ್ದು ಕಾಣುತ್ತಿವೆ.

ಭಾರತ ಐ.ಟಿ. information technology ಯಲ್ಲಿ ಸಿಕ್ಕಾಪಟ್ಟೆ ಮುಂದುವರಿದಿರುವುದು ಸತ್ಯ. ಜಗತ್ತಿನಲ್ಲೇ ಅತಿಹೆಚ್ಚು ಸಾಫ಼್ಟ್-ವೇರ್ ಎ಼ಕ್ಸ್ಪೋರ್ಟ್ ಮಾಡುವ ದೇಶ , ನಮ್ಮ ದೇಶ. ಆದರೆ ಒಂದು ಸಮೀಕ್ಷೆಯ ಪ್ರಕಾರ ನಮ್ಮ ಬ್ಯಾಂಕ್-ಗಳು , ಸರಕಾರಿ ಸಂಸ್ಥೆಗಳು ಮತ್ತು ಸ್ವತಹ ಸರಕಾರ ಬಳಸುವ ಸಾಫ಼್ಟ್-ವೇರ್ ಗಳು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಿಲ್ಲವೆನ್ನುವುದು ಸತ್ಯ. ಇದರಿಂದಾಗಿ ಈಗಿತ್ತಲಾಗೆ ಹಲವು loop holes ಅಲ್ಲಿ ಇಲ್ಲಿ ಸಿಗುತ್ತಿವೆ. ಇನ್ನು ಭಾರತೀಯ ಆಡಳಿತಕ್ಕೆ ಸಂಬಂಧಿಸಿದ , ಗಣಕೀಕೃತಗೊಂಡ ದಾಖಲೆಗಳ ಗೌಪ್ಯತೆ ಅದ್ಯಾವ ಗುಣಮಟ್ಟದ್ದಾಗಿದೆ ಎಂಬುದು ದೇವರಿಗೇ ಗೊತ್ತು. ಯಾಕೆಂದರೆ, ಅಮೇರಿಕಾದಂತಹ high profile in security ರಾಷ್ಟ್ರಗಳೇ ಹಲವು ಬಾರಿ ಎಡವುತ್ತಿದ್ದಾರೆ. ಅದಕ್ಕೆ ಸಾಕ್ಷಿಯೆಂಬಂತೆ ಅಮೇರಿಕಾದ ಸೆನೆಟ್ ನ ಗೌಪ್ಯ ಮಾಹಿತಿಯ ಮೇಲೆ ಈಗಿತ್ತಲಾಗೆ ಚೈನಾದ ಹ್ಯಾಕರ್ ಗಳು ನಡೆಸಿದ ದಾಳಿಯೇ ಸಾಕ್ಷಿ (ಹ್ಯಾಕಿಂಗ್- ಗೌಪ್ಯ ಮಾಹಿತಿಯನ್ನು ಕದಿಯುವುದು). C.I.A. ಅಂತಹ ಮಹಾ ಗೌಪ್ಯ ತಾಣಗಳನ್ನೇ ಯಶಸ್ವಿಯಾಗಿ ಹ್ಯಾಕ್ ಮಾಡಿದ್ದಾರೆ ಚೈನಾದವರು. ಹೀಗಿರುವಾಗ ಇದನ್ನೆಲ್ಲ ಕ್ಷಣಮಾತ್ರದಲ್ಲಿ ನಾಳೆ ಪಾಕಿಸ್ತಾನದವರು ಕಲಿತು ನಮ್ಮ ಮೇಲೆ ದಾಳಿ ಮಾಡಿದರೆ ಅದನ್ನು shock ಎಂಬಂತೆ ನೋಡುವ ಸ್ಥಿತಿಯಲ್ಲಿದ್ದೇವೆ ನಾವು. ಮತ್ತೆ ನಮ್ಮ ರಾಜಕಾರಣಿಗಳು, ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ ಎನ್ನಬಹುದು ಆದರೆ ಅಷ್ಟರಲ್ಲೇ ನಮ್ಮ ಅತೀ ಗೌಪ್ಯ ಮಾಹಿತಿಗಳು mis-use ಆಗಿಬಿಡಬಹುದು.

ಸೂಜಿಗವೆಂದರೆ, ನಮ್ಮದೇ ಆದ ಕೆಲ ಬ್ಯಾಂಕುಗಳು, ಭಾರತೀಯ ಸಾಫ಼್ಟ್-ವೇರ್ ತಂತ್ರಜ್ನರನ್ನು ಬಳಸಿಕೊಳ್ಳದೇ, ಅಗ್ಗದಲ್ಲಿ ಸಾಫ಼್ಟ್-ವೇರ್ ತಯಾರಿಸುವ ಫಿಲಿಪೀನ್ಸ್ ನಂತಹ ದೇಶಗಳಿಗೆ ಕೆಲಸವನ್ನು outsource ಮಾಡುತ್ತಿದ್ದಾರೆ. ಹಾಗೆ ನೋಡಿದರೆ, ಭಾರತೀಯ ತಂತ್ರಜ್ನರು ಮನಿಲಾ, ಚೈನಾದ ತಂತ್ರಜ್ನರಿಗಿಂತ ಸ್ವಲ್ಪ ದುಬಾರಿ, ಆದರೆ ಬಹಳ ಪರಿಣಿತರು ಮತ್ತು ಬುದ್ಧಿವಂತರು. ಆದರೆ ನಮ್ಮ ಬ್ಯಾಂಕ್-ಗಳ ಅಗ್ಗದ ಬುದ್ಧಿಯಿಂದ ಇವತ್ತು ನಾವು ನಮಗೇ risk ತಂದುಕೊಳ್ಳುತ್ತಿರುವುದು ಸುಳ್ಳಲ್ಲ. ಇದು private sectorನವರ ಹಣೆಬರಹವಾದರೆ, ನಮ್ಮ ಸರಕಾರಿ ಕೆಲಸಗಳಲ್ಲಿ qualityತೊಂದರೆ ಇನ್ನೊಂದು ಕಾರಣದಿಂದ ಕಾಣಿಸಿಕೊಳ್ಳುತ್ತಿದೆ. ಸರಕಾರಿ ಕೆಲಸಗಳನ್ನು ಅಗ್ಗದ ಟೆಂಡರ್ ಗೆ ಚಿಕ್ಕಪುಟ್ಟ ಕಂಪನಿಗಳು ತೆಗೆದುಕೊಂಡು ಅಲ್ಲಿ ಗೌಪ್ಯತೆಯ loopholes ಜಾಸ್ತಿಯಾಗುತ್ತಿವೆ. ಜಗತ್ತಿನ ಮೂರನೆಯ ಮಹಾಯುದ್ಧವೇ ಇಂಟರ್ನೆಟ್ ಸಮರ ಎಂದು ಅಮೇರಿಕಾ ಕುಣಿದಾಡುತ್ತಿದ್ದರೆ, ಇದೆಲ್ಲವೂ ಅವರ ಸಮಸ್ಯೆಯಷ್ಟೇ ಎಂದು ನಾವು ಕೈ ಕಟ್ಟಿ ಕೂತಿದ್ದೇವೆ. ನಮ್ಮಲ್ಲಿ resource ಇದೆ, ತಂತ್ರಜ್ನರಿದ್ದಾರೆ, ತಂತ್ರಜ್ನಾನವಿದೆ ಆದರೆ ಅದರ ಸರಿಯಾದ ಬಳಕೆಯಾಗುತ್ತಿಲ್ಲ. ಇದಕ್ಕೆ ನಮ್ಮ ಖುರ್ಚಿಯಲ್ಲಿ ಕೂತಿರುವ ಹೆಬ್ಬೆಟ್ಟುಗಳೂ ಕಾರಣವಿರಬಹುದು. ಯುದ್ಧಕಾಲದಲ್ಲಿ ಸಮರಾಭ್ಯಾಸ ಮಾಡುವುದಕ್ಕಿಂತ, ಈಗಲೇ ನಾವು ಎಚ್ಚೆತ್ತುಕೊಂಡರೆ ಒಳ್ಳೆಯದೆನ್ನಿಸುತ್ತದೆ.

ಹ್ಯಾಕಿಂಗ್(information ಕದಿಯುವಿಕೆ) ಒಂದು ರೀತಿಯ ರಾಷ್ಟ್ರೀಯ ಸಮಸ್ಯೆಯಾದರೆ, ಇನ್ನೊಂದು ರೀತಿಯ ಸಮಸ್ಯೆ ಈಗಾಗಲೆ ನಮ್ಮ ನಡುವೆಯಿದೆ. ಅದನ್ನು phishing ಅನ್ನುತ್ತಾರೆ. ಇದಕ್ಕೆ ಹೆಚ್ಚಾಗಿ ಜನಸಾಮಾನ್ಯರೇ ಬಲಿಯಾಗುವುದು. ಸುಮಾರಾಗಿ ನಿಮ್ಮ ಗೌಪ್ಯ user ID, password ಅನ್ನು ಇಂಟರ್-ನೆಟ್ ಮೂಲಕ ಕದಿಯಲಾಗುತ್ತದೆ. ಕದಿಯಲು ಹೆಚ್ಚಾಗಿ ಬಳಸಿಕೊಳ್ಳುವ ರೀತಿ ಎಂದರೆ, ನೀವು ಹೆಚ್ಚಾಗಿ ಬಳಸುವ ಯಾವುದೇ ಬ್ಯಾಂಕ್ ಅಥವಾ ಇನ್ಯಾವುದೋ ವೆಬ್-ಸೈಟಿನ ಪ್ರತಿರೂಪ ನಿರ್ಮಿಸಿ ಅಲ್ಲಿ ಮೋಸ ಮಾಡುವುದು. ಉದಾಹರಣೆಗೆ, ನೀವು ಬಳಸುವ ಬ್ಯಾಂಕ್ ನ URLನಲ್ಲಿ ಸ್ವಲ್ಪ ಬದಲಾವಣೆ ಮಾಡಿ , ಅದೇ ವೆಬ್-ಸೈಟ್ ನ ತದ್ರೂಪ ನಿರ್ಮಿಸುವುದು. ಉದಾಹರಣೆಗೆ, ನಿಮ್ಮ ಬ್ಯಾಂಕಿನ URL – http://www.abcd.com ಎಂದಿದ್ದಲ್ಲಿ, ಕಳ್ಳರು ತಮ್ಮದೇ ಆದ ವೆಬ್-ಸೈಟ್ ಅನ್ನು http://www.abdc.com ಎಂದು ನಮೂದಿಸಿಕೊಂಡಿರುತ್ತಾರೆ. ಅದರ ರೂಪ ನಿಮ್ಮ ಪಕ್ಕಾ ಬ್ಯಾಂಕಿನ ವೆಬ್-ಸೈಟ್ ನ ರೂಪವೇ ಆಗಿರುತ್ತದೆ. ಒಮ್ಮೆ ನಿಮ್ಮ ಚಿಕ್ಕ ಟೈಪ್ ತಪ್ಪಿನಿಂದ ನೀವು ಅಲ್ಲಿ ತಲುಪಿ ನಿಮ್ಮ user ID, password ಕೊಟ್ಟಿರೆಂದರೆ ಮುಗಿಯಿತು, ಕ್ಷಣಮಾತ್ರದಲ್ಲಿ ನಿಮ್ಮ ನೈಜ ಬ್ಯಾಂಕ್ ನ ಹಣವೆಲ್ಲ ಮಾಯವಾಗಬಹುದು. ಕಳ್ಳರು ನಿಮ್ಮ user ID, password ಅನ್ನು ಬಳಸಿ ನಿಮ್ಮನ್ನು ಲೂಟಿ ಮಾಡಿಬಿಡಬಹುದು. ಅದ್ದರಿಂದ ವಿಶೇಷವಾಗಿ ಬ್ಯಾಂಕ್ ನ ಯಾವುದೇ ವ್ಯವಹಾರವನ್ನು ಆನ್-ಲೈನ್ ನಲ್ಲಿ ಮಾಡುವಾಗ ಹುಶಾರಾಗಿ ಕಾರ್ಯನಿರ್ವಹಿಸಿವುದು ಅತ್ಯವಷ್ಯ. ಇನ್ನು ಕೆಲ ವಿಚಿತ್ರ ಆಸೆ ಹುಟ್ಟಿಸುವ ಇ-ಮೇಲ್ ಗಳನ್ನು ನೀವು ಗ್ರಹಿಸಿರಬಹುದು. ಇಲ್ಲಿ click ಮಾಡಿ, ನಿಮ್ಮ ಅದೃಷ್ಟವನ್ನು ಇಂದೇ ಬದಲಾಯಿಸಿಕೊಳ್ಳಿ ಎಂದಿರುತ್ತದೆ. ನಿಮ್ಮದೇ ಬ್ಯಾಂಕಿನ ಚಿತ್ರ-ಲೊಗೊಗಳನ್ನು ಬಳಸಿಕೊಂಡು , ಇಲ್ಲಿ click ಮಾಡಿ ಎಂದಿರುತ್ತದೆ. ಹಾಗೆ ನೀವು click ಮಾಡಿದ್ದೇ ಆದಲ್ಲಿ ಅದು ಮೇಲೆ ಹೇಳಿದಂತೆ ತದ್ರೂಪಿ ವೆಬ್-ಸೈಟ್ ಗೆ ನಿಮ್ಮನ್ನು ಕರೆದೊಯ್ಯುತ್ತದೆ. ಮತ್ತೆ ನೀವು ನಿಮ್ಮ user ID, password ಅನ್ನು ಕೊಟ್ಟಿರೆಂದರೆ ಪಡ್ಚ..!

ಇದರ ತಡೆಗೆ ಈಗಾಗಲೆ ನಮ್ಮ ಪೋಲೀಸರು cyber crime ಎಂಬ ಹೊಸ ವಿಭಾಗವನ್ನೇ ಹೊಂದಿದ್ದಾರೆ ಮತ್ತು ತಕ್ಕ ಮಟ್ಟಿಗೆ ಓಡಾಡಿಕೊಂಡು ಅಲ್ಲಿ ಇಲ್ಲಿ cyber center ಅಕ್ರಮಗಳನ್ನು ಹಿಡಿದುಕೊಂಡಿದ್ದಾರೆ, ಆದರೆ ಆ ಜಗದ್ವ್ಯಾಪೀ ಯುಧ್ಧಕ್ಕೆ ನಮ್ಮ ತಯಾರಿ ಎನೇನೂ ಸಾಕಾಗ. ಒಟ್ಟಾರೆಯಾಗಿ ಇಂಟರ್ನೆಟ್ ನಲ್ಲೂ ಕೂಡ ಕಳ್ಳರು ಬಹಳ ಮುಂದುವರಿದಿರುವುದು ಬಹಳ ಆತಂಕಕಾರಿ ವಿಷಯ. ಆದರೆ , ಅದಕ್ಕೆ ಪ್ರತಿತಂತ್ರ ರೂಪಿಸುವುದರಲ್ಲಿ ನಮ್ಮ ಬ್ಯಾಂಕ್-ಗಳು ಮತ್ತು ಸರಕಾರ ಮಹತ್ವದ ಹೆಜ್ಜೆಯನ್ನಿಡುತ್ತಿಲ್ಲ. ಆಗಲೇ ಅಮೇರಿಕಾದವರು ಬಾಯಿ ಬಡಿದುಕೊಳ್ಳುತ್ತಿದ್ದರೂ, ನಮ್ಮಲ್ಲಿ ತಯಾರಿ ತಾಲೀಮು ಇನ್ನೂ ಶುರುವಾಗಿಲ್ಲ. ಎಲ್ಲ-ಉಳಿದೆಲ್ಲ ಸಮಸ್ಯೆಯಂತೆ ಈ ಸಮಸ್ಯೆಯಲ್ಲ ಎಂಬುದನ್ನು ನಮ್ಮ ಸರಕಾರ ಆದಷ್ಟು ಬೇಗ ಅರಿಯಬೇಕಾಗಿದೆ. ಯಾಕೆಂದರೆ, ಇಂಟರ್-ನೆಟ್ ನಿಂದ accessibility to information ಜಾಸ್ತಿಯಾಗಿದೆ. ಜಗತ್ತು ಚಿಕ್ಕದಾಗುತ್ತಿದೆ, ಕಳ್ಳರಿಗೂ ಕೂಡ.

-ಶಿಶಿರ

Advertisements

2 thoughts on “ನಾವು ತಪ್ಪಿಬೀಳುವುದೇ ಅಲ್ಲಿ.. ಇನ್ನಾದರೂ…

  1. Shishir, Wonderful article ! You have brought out very nicely the plight of complacency and not making any effort to get what we want.

    There are some points to ponder. How can we change the external world without developing the inner personality. At one stage or other we have to accept that we are the root cause.( at the individual level, i am the root cause).

    Transformation will not happen overnight or just by thinking that some body has to do this.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s