ಜಾಣ ಜಾರ CON-GRESS vs ಬಾಯಿಹರುಕು ಪೆದ್ದು BJP

ಜನರಿಗೆ , ಜನಶಕ್ತಿಗೆ , ಜನರ ಒಮ್ಮತಕ್ಕ ನೇರವಾಗಿ ಸವಾಲನ್ನು ಹಾಕುತ್ತಿದೆ ಎನ್ನುವುದು ಜನರಿಗೆ ತಿಳಿಯುತ್ತಿಲ್ಲ, ಇದು ಕಾಂಗ್ರೆಸ್ಸಿಗರ ಚಾಣಾಕ್ಷತನ ನೋಡಿ. ಲೋಕಜನಪಾಲ್ ಬಿಲ್ ಅನ್ನು ಅಷ್ಟು ಸರಾಗವಾಗಿ ಪಾಸ್ ಮಾಡಲು ಕಾಂಗ್ರೆಸ್ ಬಿಡುತ್ತಿಲ್ಲ. ಜಾಣ ಜಾರನಂತೆ ಕೆಲಸಮಾಡುತ್ತಿದೆ. ಕಪಿಲ್ ಸಿಬಲ್ ನನ್ನು ಎದುರಿಗಿರಿಸಿ ಸೋನಿಯಾ ಮಾತಾಡುತ್ತಾಳೆ.

ಹಾಗೆ ನೋಡಿದರೆ ಕಾಂಗ್ರೆಸ್ ಮೊದಲಿನಿಂದ ಮಾಡಿದ್ದೂ ಅದನ್ನೇ. ಪ್ರಮುಖ ಮುಖಂಡರು ಇಂಥಹ sensitive ವಿಚಾರಗಳ ಬಗ್ಗೆ ಮಾತನಾಡದಂತೆ ಕಾಂಗ್ರೆಸ್ ನೋಡಿಕೊಳ್ಳುತ್ತದೆ. ಈ ಕೆಲಸಕ್ಕಾಗಿಯೇ ಅದು ಕೆಲವರನ್ನು ಬೆಳೆಸಿಟ್ಟುಕೊಂಡಿರುತ್ತದೆ. ಕಪಿಲ್ ಸಿಬಲ್ ಆ ಲೆಕ್ಕದ ಮನುಷ್ಯ. ಆತನನ್ನು ಕಾಂಗ್ರೆಸ್ ಆಗ ಈಗ ಮತನಾಡಲು ಅವಕಾಶ ನೀಡುತ್ತದೆ. ಮತ್ತೆ ಜನಕ್ಕೆ ಕೋಪ ಬಂದರೆ, ಚೂಟಿದ ಮಗುವನ್ನು ಸಂತೈಸಿದಂತೆ ನಾಟಕ ಮಾಡುತ್ತದೆ. ಜನಸಾಮಾನ್ಯನಿಗೆ ಒಂದಿನಿತೂ ಅನುಮಾನ ಬರುವುದೇ ಇಲ್ಲ, ಮತ್ತೆ ಮಲಗುವಾಗ ಕಾಂಗ್ರೆಸ್ ಒಂದು ಒಳ್ಳೆಯ ಪಕ್ಷ, ಅಲ್ಲಿ ಕೆಲವು ಅಡ್ಡಬಂಡೆಗಳು ಇವೆ ,ಅವು ಸಹಜ ಎಂದು ಚಾದರ ಎಳೆದುಕೊಳ್ಳುತ್ತಾನೆ! ಇನ್ನು ಭಾ.ಜ.ಪಾ. ಮಾಡುವ ತಪ್ಪನ್ನು ಎತ್ತಿ ಹೇಳಬೇಕಿಲ್ಲವಲ್ಲ! ಅಲ್ಲಿ ಯಾವುದೇ ವಿಷಯವಿರಲಿ, ಎಲ್ಲರೂ ಬಾಯಿಹರುಕರಂತೆ ತಾಮುಂದು-ತಾಮುಂದು ಎಂದು ಮಾತನಾಡಿ ಸಕಾ-ಸುಮ್ಮನೆ imageಅನ್ನು ಹಾಳು ಮಾಡಿಕೊಳ್ಳುತ್ತಾರೆ !

ಇನ್ನಾದರೂ ಭಾ.ಜ.ಪಾ ಬುದ್ಧಿ ಕಲಿತುಕೊಳ್ಳಲಿ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s