ಹಗರಣ – ಹರಗಣ – ಅನಿಷ್ಟ ಗಣ!

ಎಲ್ಲರಿಗೂ ಸಾಕು ಸಾಕೆನ್ನುವಷ್ಟು ಹಗರಣಗಳು ಈಗಿತ್ತಲಾಗೆ ಹೊರ ಬೀಳುತ್ತಿವೆ. ದಿನಕ್ಕೊಂದೆಂಬಂತೆ. ನಮ್ಮ ಪತ್ರಿಕೆಯವರು, ವಾರ್ತಾ ಚೆನಲ್-ನವರು ಇದ್ದದ್ದರಲ್ಲೇ ದೊಡ್ಡ ದೊಡ್ಡ ಹಗರಣಗಳನ್ನು ಹೆಕ್ಕಿ ಜನರಿಗೆ ತಮ್ಮ ಉದಾರ ಮನಸ್ಸಿನಿಂದ ಸುದ್ದಿ ಮುಟ್ಟಿಸುತ್ತಿವೆ. ಎಲ್ಲವನ್ನೂ ಬರೆದರೆ ನಮ್ಮ ಪತ್ರಿಕೆಯಲ್ಲಿ ಬೇರೆ ಸುದ್ದಿಯೇ ಇರುವುದಿಲ್ಲವೆಂಬ ತಲೆಬಿಸಿ ಹಲವು ಸಂಪಾದಕರಿಗಿದ್ದಿರಬಹುದು, ಅಥವಾ ದೊಡ್ಡದಕ್ಕೆ ಮಾತ್ರ ’ಹೌದಾ!’ ಎನ್ನುವ ನಮ್ಮ ಮನಸ್ಸನ್ನು ಅರ್ಥಮಾಡಿಕೊಂಡಿರುವ ಚಣಕತನವಿರಬಹುದು.

ದಿನಂಪ್ರತಿ ಹಗರಣಗಳು ಜನರ ಮೇಲೆ ಬಿದ್ದು ಬಿದ್ದು ಈಗ ಅವೆಲ್ಲ ಒಂದು ವಿಷಯವೇ ಅಲ್ಲವೆಂಬಂತಾಗಿಬಿಟ್ಟಿದೆ ಬಿಡಿ. ನಮ್ಮಲ್ಲಿಯೂ ಜಾಡ್ಯತೆ ಹುಟ್ಟಿಸುವ ಮಹಾನ್ ಕೆಲಸಕ್ಕೆ ಯಾರನ್ನು ದೂಶಿಸಬೇಕು ಎಂದು ತಿಳಿಯುತ್ತಿಲ್ಲ. ಹಾಗೆ ತಿಳಿಯದ ಪಕ್ಷದಲ್ಲಿ ಸಮಸ್ತ ಸಮಾಜವನ್ನೇ ಹೊಣೆಯೆಂದಾಗಿಸಿ ನಾವು ಅರಾಮವಾಗಿ ನಿದ್ದೆಗೆ ಜಾರಿ ಬೆಳಿಗ್ಗೆ ಎದ್ದು ಮತ್ತಿಷ್ಟು ಹಗರಣಗಳನ್ನು ಓದುತ್ತ , ಚಹಾಕ್ಕೆ ಸಕ್ಕರೆ ಪ್ರಮಾಣವನ್ನು ದೂಷಿಸುತ್ತ ಹೆಂಡತಿಯೊಂದಿಗೆ ಹರಟಿ ಮತ್ತೆ ನಿತ್ಯದ ಕೆಲಸಕ್ಕೆ ಅಣಿಯಾಗಬಹುದು.

ಕಾಂಗ್ರೆಸ್ಸಿನವರು ಭಾ.ಜ.ಪಾ.ಕ್ಕೆ ಮತ್ತೆ ಭಾ.ಜ.ಪಾ. ಅವರು ಜನತಾ ದಳಕ್ಕೆ ದೂರಿಕೊಂಡು – ನೀವು ನಮಗಿಂತ ಹೆಚ್ಚಿಗೆ ಮೊತ್ತದ ಹಗರಣಗಳಲ್ಲಿ ಭಾಗಿಯಾಗಿದ್ದೀರಿ ಎನ್ನುವ ಕೆಸರೆರಚಾಟ. ೨೦೧೦-೧೧ ಈ ಎರಡು ವರುಷ ದೇಶ ಅತಿ ಹೆಚ್ಚು ಹಗರಣಗಳನ್ನು ಕಂಡುಬಂದಿದೆ ಎಂಬುದು ವರದಿ. ಈ ವರದಿ ಅತೀ ಸತ್ಯ. ಆದರೆ ಈ ಎರಡು ವರುಷ ಮಾತ್ರ ಅತೀ ಹೆಚ್ಚು ಹಗರಣಗಳು ’ನಡೆದಿವೆ’ ಎನ್ನುವಂತಿಲ್ಲ. ಪ್ರಕರಣಗಳು ದಾಖಲುಗೊಂಡಿದ್ದು – ಬಹಿರಂಗಗೊಂಡಿದ್ದು ಈ ಅವಧಿಯಲ್ಲಿ ಹೆಚ್ಚು ಅಷ್ಟೆ. ಕಾರಣ ಈಗಿತ್ತಲಾಗೆ ಮಹತ್ವೋತ್ತಮ ಸ್ಥಾನಕ್ಕೆ ಬಂದ ನಮ್ಮ ಮಾಧ್ಯಮಗಳಿರಬಹುದು – ಅಥವಾ ಬೇರೆ ಬೇರೆ ಮಾಧ್ಯಮಗಳ ನಡುವಿನ ಸ್ಪರ್ಧೆಯಿರಬಹುದು. ಒಳ್ಳೆಯದೇ ಬಿಡಿ ಈ ಸ್ಪರ್ಧೆ, ಆದರೆ ಇವೆಲ್ಲ ಸೇರಿ ಒಬ್ಬ ಸಮಾನ್ಯ ಮನುಷ್ಯನಲ್ಲಿ ರಾಜಕೀಯದ ಬಗೆಗೆ – ದೇಶದ ಬಗೆಗೆ ಒಂದು ಜಾಡ್ಯತೆ ಮೂಡಿಸುತ್ತಿರುವುದು ವಿಪರ್ಯಾಸ.

ಆದರೂ ಏನೇಹೇಳಿ – ಕಾಂಗ್ರೆಸ್ಸಿನವರದ್ದು ಹಗರಣಗಳಲ್ಲಿ ಎತ್ತಿದ ಕೈ. ಕಾರಣ ಮಾತ್ರ ಇಷ್ಟೆ, ಅವರು ಈ ದೇಶವನ್ನು ಆಳಿದ ಕಾಲ ಹೆಚ್ಚು. ಹಾಗೊಂದೊಮ್ಮೆ ಭಾ.ಜ.ಪಾ ಕಾಂಗ್ರೆಸ್ಸಿನವರಷ್ಟು ಕಾಲ ಆಳಿದ್ದರೆ ಕಥೆ ಬೇರೆ ಇರುತ್ತಿರಲಿಲ್ಲ ಬಿಡಿ. ನಾನು ಸದಾ ಅಂದುಕೊಳ್ಳುವ ಒಂದು ವಿಚಾರ ನೆನಪಿಗೆ ಬರುತ್ತದೆ, ನನ್ನೆದುರಿಗೆ ಯಾವುದೇ ವ್ಯಕ್ತಿ ಇರಲಿ, ಆ ವ್ಯಕ್ತಿ ಸರಿ ಇಲ್ಲ- ಅಥವಾ ಒಳ್ಳೆಜನ ಎಂದು ಎರಡರಲ್ಲಿ ಒಂದು ತೀರ್ಮಾನಕ್ಕೆ ಬಂದು ನಮ್ಮ ಸಂಬಂಧ ಬೆಳೆಯುತ್ತದೆ. ಒಳ್ಳೆ ಜನ ಅಲ್ಲದೆ ಹೋದಲ್ಲಿ, ನಮಗೆ ಅವಷ್ಯಕತೆ ಇದ್ದಲ್ಲಿ ಒಂದು ಎಲ್ಲೆಯಲ್ಲಿ ಅವರನ್ನು ಆಕ್ರಮಿಸಿರುತ್ತೇವೆ. ಆದರೆ ನಾನು ಇನ್ನೊಬ್ಬರಿಗೆ ದೂಶಿಸುವಾಗ ಅಥವಾ ಹೊಗಳುವಾಗ ಒಂದು ವಿಚಾರ ತಲೆಯಲ್ಲಿ ಫಕ್ಕನೆ ಹಾದು ಹೋಗುತ್ತದೆ. ’ ನಾನು ಇವ ಹುಟ್ಟುದ್ದಲ್ಲಿ ಹುಟ್ಟಿ – ಬೆಳೆದದ್ದಲ್ಲಿ ಬೆಳೆದಿದ್ದರೆ ನಾನೇ ಅವನಾಗಿರುತ್ತಿದ್ದೆ. ಅವನದೇ ಮನಸ್ಸು ನನ್ನದಾಗಿರುತ್ತಿತ್ತು, ಅವನದೇ ರೂಪ – ಹಾವ-ಭಾವ ನನ್ನಲ್ಲಿರುತ್ತಿತ್ತು. ಅಷ್ಟೆಲ್ಲ ಯಾಕೆ, ನಾನೆ ಅವನಾಗಿರುತ್ತಿದ್ದೆ.’ ಇದನ್ನು ಭಾ.ಜ.ಪಾ. ಅವರು ಸ್ವಲ್ಪ ಓದಿಕೊಳ್ಳಲಿ. ಮಹೋನ್ನತರೇ, ನೀವು ಇಷ್ಟು ಕಾಲ ಕಂಗ್ರೆಸ್ಸಿನವರಂತೆ ಆಳಿದ್ದರೆ ನಿಮ್ಮ ಹಣೆಬರಹವೂ ಇದೇ ಇರುತ್ತಿತ್ತು ಬಿಡಿ. ಇಷ್ಟಕ್ಕು – “Politics is the gentle art of getting votes from the poor and campaign funds from the rich by promising to protect each from the other!”. ಈ ರಾಜಕೀಯ ಮತ್ತು ಭ್ರಷ್ಟಾಚಾರ ಎರಡನ್ನು ಬೇರೆ ಎನ್ನಲು ಸಾಧ್ಯವೇ ಆಗದ ಸ್ಥಿತಿ ನಮ್ಮದು.

ಆದರೆ ಕಾಂಗ್ರೆಸ್ಸಿನವರು ಕೇಂದ್ರದಲ್ಲಿ ಕೆಳಗಿಳಿಯಬೇಕು. ಕಾರಣ ಇಷ್ಟೆ, ಭಾ.ಜ.ಪಾ. ದವರೆಲ್ಲ ಮಡಿ ಮನುಷ್ಯರೆಂದಲ್ಲ, ಆದರೆ ಒಂದು ಚೇಂಜ್ ಬೇಕಾಗಿದೆ. ಬ್ಯಾಂಕ್ ಮ್ಯಾನೇಜರ್, ಬಸ್ ಕಂಡಕ್ಟರ್ ಗಳು ವರ್ಗವಾಗುವಂತೆ ಇಲ್ಲೊಂದು ಬದಲಾವಣೆ ಬೇಕಾಗಿದೆ. ಇದರರ್ಥ, ಖಾಯಂ ಆಗಿ ನಮಗೇ ಭಾ.ಜ.ಪಾ. ಅವರೇ ಬೇಕು ಎಂದು ಹಟ ಮಾಡುವಂತಿಲ್ಲ. ಭಾ.ಜ.ಪಾ. ದಲ್ಲಿ both constructive & destructive mindಗಳಿವೆ. ಎಲ್ಲ ಪಕ್ಷಗಳಂತೆ. ಬದಲಾವಣೆ ತರದಿದ್ದಲ್ಲಿ ಮತ್ತೆ ಜಾಡ್ಯತೆ ಸಹಜ. ಬೇಕಾಗಿದೆ ಬದಲಾವಣೆ.

ನಮ್ಮ ದೇಶ ಕಂಡ ದೊಡ್ಡ ದೊಡ್ಡಾ ಹಗರಣಗಳ ಪಟ್ಟಿ – ಕಥೆ- ಆದರೆ, ಇನ್ನೆಷ್ಟು ಹಗರಣಗಳು ದಿನಂಪ್ರತಿ ಗ್ರಾಮ-ತಲ್ಲೂಕು ಪಂಚಾಯತಿ ಹಂತದಲ್ಲಿ ನಡೆಯುತ್ತವೆ! ಲೆಕ್ಕವಿಲ್ಲ ಬಿಡಿ. ಅದಕ್ಕೇ ಜನ ಹೇಳುವುದು – ಬಿಟ್ಟು ಬಿಡಿ, ಈ ದೇಶದ್ ಕಥೆ ಇಷ್ಟೆ ಕಣಮ್ಮೋ! ಆದರೆ ಹೇಗ್ ಬಿಡೊಕಾಗೊತ್ತೆ ಸ್ವಾಮೀ……!!!! ಮನಸ್ಸು ಕೇಳೊಲ್ವೆ! ಈಗ ಕೂತು ಒಂದಿಷ್ಟು ಹಗರಣಗಳನ್ನು ಪಟ್ಟಿ ಮಾಡೋಣ.. ಯವುದೂ ರಾಜಕೀಯ ಕುಮ್ಮಕ್ಕಿಲ್ಲದೇ ನಡೆದಿಲ್ಲವೆಂಬುದು ನೀವೇ ನೋಡಿ. ಕಾಂಗ್ರೆಸ್ಸಿನ ಹಣೆಬರಹ ಬಿಡಿಸಿಡುವುದು ನನ್ನ ಉದ್ದೇಶವಲ್ಲ, ಆದರೆ !!!…!!!

೧. ಹರಿದಾಸ್ ಮುಂಡ್ರಾ ಹಗರಣ – ೧೯೫೬ ರಲ್ಲಿ ಪ್ರಕರಣ ಬಹಿರಂಗ. ಕಾಂಗ್ರೆಸ್ ನಾಯಕರ ಉದಾರ ಹಸ್ತದ ಅಡಿಯಲ್ಲಿ: (ಅಜ್ಜ ನೆಹರು)
ಕಲ್ಕತ್ತಾ ಮೂಲದ ಹರಿದಾಸ್ ಮುಂಡ್ರಾ ಒಬ್ಬ ಸಾಮಾನ್ಯ ಸೇಲ್ಸ್ ಮ್ಯಾನ್. ವಿದ್ಯುತ್ ಬಲ್ಬುಗಳನ್ನು ಮಾರಿಕೊಂಡ (ಅ)ಸಾಮಾನ್ಯ ಮನುಷ್ಯ. ಶೇರ್ ವ್ಯವಹಾರಗಳಲ್ಲಿ ಕೂಡ ತನ್ನನ್ನು ತೊಡಗಿಸಿಕೊಂಡಿದ್ದ. ಆದರೆ ಆತ ಸಡನ್ನನೆ ಶ್ರೀಮಂತನಾಗಿ ಹೋದ, ಅಷ್ಟಿಷ್ಟಲ್ಲ… ಆಗಿನ ಕಾಲದಲ್ಲೇ ಬರೋಬ್ಬರಿ ನಾಲ್ಕು ಕೋಟಿ ರೂಮಾಯಿ – ಸುಮಾರು ಹತ್ತು ಮಿಲಿಯನ್ ಅಮೇರಿಕನ್ ಡಾಲರುಗಳು ! ೧೯೫೬ರಲ್ಲಿ ಆತನನ್ನು ಫ಼ೋರ್ಜರಿ ಕೇಸಿನಲ್ಲಿ ಬೋಂಬೆ ಸ್ಟಾಕ್ ಎ಼ಕ್ಸ್ಚೇಂಜ್ನಲ್ಲಿ ಪ್ರಶ್ನಿಸಲಾಯಿತು. ಇಷ್ಟಾಗ್ಯೂ, ಆತ ಬೆಳೆಯುತ್ತಲೇ ಹೋದ. ತನ್ನ ಕಾಂಗ್ರೆಸ್ ಮಾಹಾಮುಖಂಡರ – ಹೈಕಮಾಂಡರುಗಳ ಸಹಾಯದಿಂದ ನಿರಾತಂಕವಾಗಿ ತನ್ನ ಹಲಕಟ್ ಕೆಲಸಗಳನ್ನು ಮುಂದುವರಿಸಿದ. ಹಂಚುತ್ತ ಹಂಚುತ್ತ ಬೆಳೆಯುತ್ತ ಬೆಳೆಯುತ್ತ ಕಳೆಯೊಂದು ಹೆಮ್ಮರವಾಗುತ್ತ ಸಾಗಿತು. ಸರಕಾರಿ ಸ್ವಾಮ್ಯದ Life Insurance Corporation (LIC) ಹಣಕ್ಕೂ ಕೈ ಹಾಕಿದ. ತನ್ನ ಸ್ವಂತ ರೋಗಗ್ರಸ್ತ ಕಂಪನಿಗಳಲ್ಲಿ LIC ಯ ಹಣವನ್ನು ತಂದು ಹೂಡಿದ ಭೂಪ ಈತ! ಸುಮಾರು ೧.೩ ಕೋಟಿಯಷ್ಟು ಹಣವನ್ನು (ಲೆಕ್ಕಕ್ಕೆ ಸಿಕ್ಕಿದ್ದು!) ಸರಕಾರಿ ಒತ್ತಡ ಹೇರಿ LIC ಕಾರ್ಯಕಾರಿ ಸಮೀತಿಯ ಕಣ್ಣನ್ನೇ ತಪ್ಪಿಸಿಕೊಂಡು ನುಂಗಿ ತೇಗಿದ. ಈ ಘಟನೆ ಒಂದು ಹುಂಬ ಧೈರ್ಯವನ್ನು ಕಾಂಗ್ರೆಸ್ಸಿಗರಲ್ಲಿ ಹುಟ್ಟುಹಾಕಿದ್ದಿರಲೂಬಹುದು. ಇದೊಂದು ಬಹುಕೋಟಿ ಹಗರಣ ಎಲ್ಲವಕ್ಕೂ ನಾಂದಿಯಾಯಿತೇನೋ!
ಹೋಲ್ಡ್ ಆನ್… ಅಂದಹಾಗೆ ಈ ಪ್ರಕರಣಗಳಲ್ಲಿ ಥಳುಕು ಹಾಕಿಕೊಂಡ ಮಹಾನುಭಾವರ ಹೆಸರುಗಳು : ಜವಾಹರಲಾಲ್ ನೆಹರು , ರಾಮ್ ಕಿಶನ್ ದಾಲ್ಮಿಯಾ, ಕೊನೆಯಲ್ಲಿ ಅಂದಿನ ಹಣಕಾಸು ಮಂತ್ರಿ ಟಿ.ಟಿ.ಕ್ರಿಶ್ನಮಾಚಾರಿ ರಾಜಿನಾಮೆಯನ್ನೂ ಕೊಟ್ರು. ಹೀಗೆ ಶುರು ಆದದ್ದು ನೋಡಿ ಕಾಂಗ್ರೆಸ್ ಹಲಕಟ್ ಕೆಲಸಗಳು…

೨. ನಾಗರ್ವಾಲ್ ಹಗರಣ – ೧೯೭೧ :(ಅಮ್ಮ ಇಂದಿರೆ)
ಮೇ ೨೪, ೧೯೭೧. ಬರೋಬ್ಬರಿ ೬೦ ಲಕ್ಷ ರೂಪಾಯಿಯನ್ನು ಪಾರ್ಲಿಮೆಂಟ್ ಬ್ರಾಂಚಿನ ಸ್ಟೇಟ್ ಬ್ಯಾಂಕ್ ಆಫ಼್ ಇಂಡಿಯಾದಿಂದ ವಿತ್-ಡ್ರಾ ಮಾಡಿದ ವೇದ್ ಪ್ರಕಾಶ್ ಮಲ್ಹೋತ್ರಾ ಇಂದಿರಾ ಗಾಂಧಿಯವರ ಆಜ್ನೆಯ ಮೇರೆಗೆ ಬಾಂಗ್ಲಾದೇಶದ ಬಾಬುವಿಗೆ ಕೊಟ್ಟನಂತೆ. ಆಮೇಲೆ ತಿಳಿಯಿತು , ರುಸ್ತಮ್ ಸೊಹಾಬ್ ನಗರ್ವಾಲ್ ಎಂಬ ನಿವ್ರತ್ತ R&AW ಅಧಿಕಾರಿ ಇಂದಿರಾ ಗಾಂಧಿಯ ಹೆಸರಿನಲ್ಲಿ ಫೋನ್ ಕರೆ ಮಾಡಿ ಹಣವನ್ನು ಲಪಟಾಯಿಸಿ ಅದನ್ನು ’ಮುಕ್ತಿ ವಾಹಿನಿ’ ಎಂಬ ಗೆರಿಲ್ಲಾ ಗೊಂಪಿಗೆ ತಲುಪಿಸಲು ಪ್ಲಾನ್ ಮಾಡಿದ್ದ ಎಂದು. ಎಲ್ಲ ಸರಿ ಆಗಿದ್ದರೆ , ಹಣ ಲಪಟಾಯಿಸಿದ ದಿನವೇ ನಾಗರ್ವಾಲ್ ನೇಪಾಳಕ್ಕೆ ಹಾರಲು ಸಕಲ ಸಿದ್ಧತೆ ನಡೆಸಿದ್ದ.
ಅಂದಿನ ವಿರೋಧಪಕ್ಷದವರು ಇಷ್ಟೆಲ್ಲ ಹಣ ಇಂದಿರಾಗಾಂಧಿಯ ಬಳಿ ಎಲ್ಲಿಂದ ಬಂತೆಂದು ಪ್ರಶ್ನಿಸಿತು. ಇಂದಿರಾ ಉತ್ತರಕೊಡಲಿಲ್ಲ – ಅಥವಾ ಉತ್ತರವಿರಲಿಲ್ಲವೇನೊ ! ನಂತರ ಇದರ ತನಿಖೆ ನಡೆಸುತ್ತಿದ್ದ ಡಿ.ಕೆ.ಕಶ್ಯಪ್ಅವರ ಕೊಲೆಯಾಯಿತು. ಜೈಲಲ್ಲಿದ್ದ ನಾಗರ್ವಾಲ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ ಆತನ ಕಡೆ ಯಾರೂ ನೋಡಲೇ ಇಲ್ಲ – ಒಂದು ದಿವ್ಯ ನಿರ್ಲಕ್ಶ್ಯದಲ್ಲಿ ನಾಗರ್ವಾಲ್ನನ್ನು ಕೊಲ್ಲಲಾಯಿತು. ಇಂದಿರೆಯ ಕೆಂಗಣ್ಣಿಗೆ ಬಿದ್ದಮೇಲೆ ಸರ್ವನಾಶವಾಗದೇ ಇದ್ದೀತೆ ? ಇಲ್ಲಿಂದ ಇಂದಿರಮ್ಮ ಅಪ್ಪನ ಚಾಳಿ ಮುಂದುವರಿಸಿಕೊಂಡು ಹೋದರು ಎನ್ನುವುದು ಹಲವರ ಪ್ರಕಾರ ಇತಿಹಾಸ !

೩. ಬೋಫ಼ೋರ್ಸ್ -೧೯೮೦ (ಮಗ ರಾಜೀವ್)
ಇದು ದೇಶಕಂಡ ಮೋದಲ ಶತಕೋಟಿ ಹಗರಣ. (ಮುಂದುವರಿಯುತ್ತದೆ…)

Advertisements

One thought on “ಹಗರಣ – ಹರಗಣ – ಅನಿಷ್ಟ ಗಣ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s