ಸುತ್ತ ಸುತ್ತುತ್ತ…

ಆತ ಅಲ್ಲಿಗೆ ಅಕಸ್ಮಾತ್ ಅಗಿ ಹೋದವನು. ಆತನ ಉದ್ದೇಶ ದೇವರಿಗೆ ಕೈಯ ಮುಗಿಯುವುದಲ್ಲ. ಸುಮ್ಮನೆ ದೇವರನ್ನು ಮಾತಾಡಿಸಿ ಹೋಗಲು ಬಂದವನಲ್ಲ. ನೇರವಾಗಿ ನಡೆದ್ದಿದ್ದಾನೆ. ಚಪ್ಪಲಿಯನ್ನು ಮರೆತು ನಡೆದಿದ್ದಾನೆ. ಮತ್ತೆ ಸ್ವಲ್ಪ ಮುಂದೆ ಬಂದ ನಂತರ ಏನೋ ನೆನಪಾಗಿದೆ. ಈಗ ಹಿಂದಕ್ಕೆ ಹೋಗುತ್ತಿದ್ದರೆ ಅದೊಂದು ರೀತಿಯ ಅವಮಾನ. ತನ್ನ ಉದ್ದೇಶ ಇದಲ್ಲದೇ ಹೋದರೂ ತಾನು ಇಲ್ಲಿಗೆ ಬಂದದ್ದು ಮತ್ತೆ ನೆನಪಾಗಿದೆ. ಈಗ ಚಪ್ಪಲಿಯನ್ನು ಇಡುವ ಜಾಗವನ್ನು-ಅಲ್ಲೆ ಎಲ್ಲೋ ಬಿದ್ದಿರಲೂಬಹುದಾದ ಮನಸ್ಸನ್ನು- ಹುಡುಕುತ್ತಿದ್ದಾನೆ. ಫಕ್ಕನೆ ಅವಳ ಕಾಲರ್ ಟೋನ್ ನೆನಪಾಗಿದೆ.ಹೌದು ಅದು ಯಾವ ಸಿನಿಮಾದ್ದು!! ನೆನಪಿಗೇ ಬರುತ್ತಿಲ್ಲವಲ್ಲ! ಅದರಲ್ಲಿ ಹೀರೊಯಿನ್ನಿನ ಅಪ್ಪ ಹಾಕಿದ ಚಪ್ಪಲಿ ಮೂರನೇ ರ್ರಯಾಕಿನ ಮಧ್ಯದಲ್ಲಿ ನೋಡಿದಂತಯ್ತು.ಹೀರೊಯಿನ್ನು ಅಪ್ಪನ ಕಾಲಿಗೆ ಬಿದ್ದಾಗ ಅದೇ ಚಪ್ಪಲಿ – ಇಲ್ಲಿ. ತನ್ನ ಮನಸ್ಸು ಅದನ್ನೆಲ್ಲ ನೆನಪು ಇಟ್ಟುಕೊಂಡಿರುತ್ತದಲ್ಲ! ಆತ – ಈಗ ತನ್ನಲ್ಲೇ ಹೆಮ್ಮೆ. ಚಪ್ಪಲಿ ಇಟ್ಟಾಗಿದೆ – ಇನ್ನೂ ಅಲ್ಲೇ ನಿಂತಿರುವ ಅವನನ್ನು ಚಪ್ಪಲಿ ಇಡುವ ಅವಳು ಅನುಮಾನದಿಂದ ನೋಡಿದ್ದಾಳೆ. ಏನು ಅನುಮಾನ ಎಂದು ಇಬ್ಬರಿಗೂ ಗೊತ್ತಿಲ್ಲ. ಅಲ್ಲೇ ನೆಲಕ್ಕೆ ಬಿದ್ದಿರುವ ಪೆಪರ್ ಚೂರಿನಲ್ಲಿ “ಗೆಲ್ಗೆ” ಎಂದು ಬರೆದಿದೆ. ಅದು “ಸಿರಿಗನ್ನಡಂ ಗೆಲ್ಗೆ” ಯಿಂದ ಹಾರಿದ ಚೂರಲ್ಲವೆಂದು ಅವನ ಮನಸ್ಸಿಗೆ ಅನ್ನಿಸುತ್ತಿದೆ! ಹಾಗಾದರೆ ಇನ್ನ್ಯಾವುದರಿಂದ ಹಾರಿದ ಚೂರು ಇರಬಹುದು!! ಮನಸ್ಸು ಮತ್ತೆ ಅರ್ಧ ಒಣಗಿದ-ಸರಿಗೆಯ ಮೇಲಿನ ಬಟ್ಟೆಯಂತೆ.

ಥಟ್ಟನೆ ಕನ್ನಡ ಶಾಲೆಯ ಮಸ್ತರರ ಬೆತ್ತದ ನೆನಪು. ಅವನಿಗೆ ಮೊದಲಿನಿಂದ ಹಾಗೇ- ತಪ್ಪು ಮಾಡಿದರೆ, ಅದಕ್ಕಿಂತ ಹೆಚ್ಚಾಗಿ ತಾನು ಮಾಡಿದ್ದು ತಪ್ಪು ಅಂತೆನ್ನಿಸಿದರೆ ಮಸ್ತರರ ಬೆತ್ತದ ನೆನಪು ಬರುತ್ತದೆ. ಹೌದು ನಾನೇನೂ ತಪ್ಪು ಮಾಡಲಿಲ್ಲ ಈಗ ಆದರೂ ಯಾಕೆ ಬೆತ್ತ ಇಲ್ಲಿ ಮೂಗು ತೂರಿಸುತ್ತಿದೆ ಎಂದು ಅವನಿಗೆ ಈಗ ತಿಳಿಯುತ್ತಿಲ್ಲ. ದೇವರ ಎದುರಿಗೆ ತುಸುವೇ ದೂರದಲ್ಲಿ ಕೂತು ಅಗಿದೆ. ಅವನ  ಮತ್ತು ದೇವರ ಮಧ್ಯದಲ್ಲಿ ಅದೇಷ್ಟೋ ಜನರು ಹಾದು ಹೋಗುತ್ತಿದ್ದಾರೆ-ಸುತ್ತುತ್ತಿದ್ದಾರೆ. ಅವನು ದೇವರನ್ನು ನೋಡುತ್ತಿಲ್ಲ. ಉಳಿದವರು ನೋಡುದವುದನ್ನು ಆತ ನೋಡಿ ಅಗಿದೆ. ಜನರೆಲ್ಲಾ ತಿರುಗುತ್ತಿದ್ದಾರೆ. ಇವರು ತಿರುಗುವ ರಭಸಕ್ಕೇ ಇವರೊಟ್ಟಿಗೆ ದೇವರೂ ತಿರುಗುತ್ತಿದ್ದಾನೆ – ದೇವರೊಟ್ಟಿಗೆ ಭೂಮಿ ತಿರುಗುತ್ತಿದೆ, ಒಟ್ಟಾರೆ ಭೂಮಿ ಭಕ್ತರಿಂದ ಇನ್ನೂ ಜೀವಂತವಿದೆ ಎಂದು ಅನಿಸುತ್ತಿದೆ ಅವನಿಗೆ. ಮತ್ತೆ ವಾಸ್ತವಕ್ಕೆ ಮರಳಲು ಅವನ ಮನಸ್ಸು ಒಪ್ಪುತ್ತಿಲ್ಲ. ಹಾಗೆಂದು ತಾನು ಅವಾಸ್ಥವವಲ್ಲ ಎಂದು ಅವನಿಗೆ ಗೊತ್ತು. ಭೂಮಿ – ದೇವರು – ಸುತ್ತ ಭಕ್ತರು – ಹೀಗೆ ಎಲ್ಲ ತಿರುಗುತ್ತಿದೆ. ಅವನು ಮಾತ್ರ ಎಲ್ಲದರಿಂದ ಹೊರಗೆ. ಆತ ತಿರುಗುತ್ತಿಲ್ಲ.

ಅಲ್ಲಿ ನೂರಾಒಂದು ಸುತ್ತು ಸುತ್ತಬೇಕು.ಅಂದರೆ ಮಾತ್ರ ಫಲ. ಅಲ್ಲಿ ಸುತ್ತುತ್ತಿರುವ ಎಲ್ಲರಲ್ಲೂ ಒಂದೇ ಗುರಿ. ಎಲ್ಲರ ಗಮನ ಸುತ್ತಿನ ಲೆಕ್ಕದ ಮೇಲೆ. ಕೆಲವರಿಗೆ ಯವುದೋ ಎರಡು ಸುತ್ತು ಹೆಚ್ಚುಕಡಿಮೆ ಲೆಕ್ಕವಾಗಿದೆ. ಒಟ್ಟರೆಯಾಗಿ ಕೊನೆಯಲ್ಲಿ ನಾಲ್ಕು ಹೆಚ್ಚಿಗೆ ರೌಂಡ್ ಹಾಕಿದರಾಯ್ತು. ನಾಲ್ಕು ಹೆಂಗಸರು ಚಿಕ್ಕ ಗುಂಪಿನೊಂದಿಗೆ ಸವಕಾಶವಾಗಿ ನಡೆಯುತ್ತಿದ್ದರೆ, ಕಿರಿಯ ಭಕ್ತರಿಗೆ ಅವರನ್ನು ದಾಟಿ ಹೊಗುವುದು ಕಿರಿ ಕಿರಿ. ಆ ಗುಂಪು ಕ್ರಮೇಣ ಒಂದು ಸ್ಪೀಡ್ ಬ್ರೇಕರ್ ಆಗಿದೆ. ಆ ಗುಂಪಿನ ಮಧ್ಯೆ ಮೂರು ಚಳ್ಳೆ-ಪಿಳ್ಳೆ ಮಕ್ಕಳು ಅವರವರ ಅಮ್ಮಂದಿರ ಸೀರೆ ಎಳೆದಾಡುತ್ತ ಅವರವರ ಮುಖವನ್ನು ಅರ್ಧ ಮುಚ್ಚಿಕೊಳ್ಳುತ್ತ – ಗುಂಪಿನ ಕೈ-ಕಾಲಿಗೆಲ್ಲಾ ಸಿಕ್ಕಿಕೊಳ್ಳುತ್ತಿದ್ದಾರೆ. ಇವನ ಮನಸ್ಸು ಅಲ್ಲಿ ನಿಲ್ಲುತ್ತಿಲ್ಲ. ಒಂದೆರಡು ಬಿಳಿ ಬಿಳಿ ಹೆಂಗಸರು, ಅವರು ಕೊಂಕಣಿ ಮತನಾಡುತ್ತಿದ್ದಂತೆ ಇವನಿಗೆ ಅನಿಸುತ್ತಿದೆ. ಅವನ ಹಳೆಯ ಕಾಲೇಜಿನ ದಿನಗಳು – ಅಲ್ಲಿನ ಬಿಳಿ ಬಿಳಿ ಕೊಂಕಣಿ ಹುಡುಗಿಯರು ಥಟ್ಟನೆ ಎದುರಿಗೆ ಬಂದು ಹಾದು ಹೋದಂತೆ. ಅವರೆಲ್ಲಾ ಈಗ ಹೀಗೆ ಒಂದೆರಡು ಮಕ್ಕಳನ್ನು ಹೆತ್ತು ಸುತ್ತುತ್ತಿರಬಹುದಲ್ಲವೇ, ಈಗ ಅವರೆಲ್ಲರ ಮನಸ್ಸು-ದೇಹ-ಮೊಲೆ ಎಲ್ಲವೂ ಸೋತಿರಬಹುದು. ಸೋತು ನೆಲ ನೋಡುತ್ತಿರಬಹುದಲ್ಲವೇ! ಹಾಗದರೆ ನಾನೇ ಇನ್ನು ಸೊತಿಲ್ಲ,ಸತ್ತಿಲ್ಲ. ಮೆಲ್ಲನೆ ಆತನ ಮನಸ್ಸು ಅರಳುತ್ತಿದೆ ಇನ್ನೊಬ್ಬರ ಸೋತಿರಬಹುದು ಎಂದು. ಅವರು ಸೋತಿದ್ದಾರೆ ಎಂದು ನಾನು ನಂಬಿ ಅದರಲ್ಲಿ ತನ್ನ ಗೆಲುವನ್ನು ಕಾಣುವ ಮನಸ್ಸು-ಇದು ತನ್ನ ಮನಸ್ಸಿನ ಸೋಲೋ ಗೆಲುವೊ ಎಂದು ಆತನಿಗೆ ತಿಳಿಯದಾಗಿದೆ.ಆತನ ಮನಸ್ಸು ಈ ಎಲ್ಲಾ ಸುತ್ತುತ್ತಿರುವವರ ಸುತ್ತ ಸುತ್ತುತ್ತಿದೆ ತನ್ನ ಉಳಿವಿಗಾಗಿ. ಒಂದು ಹುಡುಗಿ ಒಂದೆರಡು ಸುತ್ತಿನಲ್ಲೇ ಪರಿಚಯದವಳಾಗಿದ್ದಾಳೆ. ಅವಳ ಮುಖವನ್ನು ನೋಡಲು ಹೆಣಗುತ್ತಿದೆ ಮನಸ್ಸು-ಆದರೆ ಪ್ರತೀ ಸಲ ಅವಳು ಇವನ ಮತ್ತು ದೇವರ ನಡುವೆ ಬಂದಾಗ ದೇವರ ಕಡೆ ತಿರುಗಿ ನೋಡಿ ಹಾಗೇ ಕೈಯ್ಯ ಮುಗಿದು ಮುಂದಕ್ಕೆ ನಡೆಯುತ್ತಿದ್ದಾಳೆ. ಮುಂದೆ ನಡೆದಂತೆ ಅವಳ ಮುಖ ಮನಸ್ಸು ಮತ್ತೆ ಮುಂದಕ್ಕೆ ತಿರುಗಿಕೊಳ್ಳುತ್ತಿದೆ.

ಅವಳು ದಾಟಿ ಹೋದ ನಂತರ ಮತ್ತೆ ಮನಸ್ಸಿನಲ್ಲಿ ಜಿಜ್ನಾಸೆ. ದೇವರಿಗೆ ಇವೆಲ್ಲ ಯಾಕೆ? ಆತ ತನ್ನ ಸುತ್ತು ಜನರು ಬಂದರೆ ಬೀಗಿ ಇವರನ್ನು ಹರಿಸುತ್ತಾನೆಯೇ? ಆತನಿಗೂ ಮನುಷ್ಯನ ಸಮಾನ್ಯ ಗುಣಗಳನ್ನು ಆರೋಪಿಸುವುದು ಸರಿಯೇ ಎಂದು ಅವನ ಮನಸ್ಸು. ದೇವರು ಎಂದರೆ ಒಂದು ಶಕ್ತಿ. ಪ್ರತಿಯೊಂದು ಶಕ್ತಿಗೂ ಒಂದು ವೀಕ್ನೆಸ್ಸ್ ಇರುವ ಹಾಗೆ ದೇವರಿಗೂ ಈ ವೀಕ್ನೆಸ್ಸ್ ಇದೆಯೇ?…. – ಈ ಬಾರಿಯೂ ಆ ಹುಡುಗಿಯ ಮುಖ ನೋಡಲು ಆಗಲೇ ಇಲ್ಲ. ಅವಳ ಕಾಲಿನ ನುಣುಪು ಮನಸ್ಸಿನಲ್ಲಿ ಏನನ್ನೋ ಹುಟ್ಟಿಹಾಕಿದೆ.ಅವಳು ಸೋತಿಲ್ಲ. ಅವಳು ಗೆಲ್ಲಲು ಬಂದಿದ್ದಾಳೆ. ಅವನ ಮನಸ್ಸು ಆ ಬಿಳಿ ಬಿಳಿ ಹೆಂಗಸರ ಮೊಲೆಯನ್ನು ನೋಡಿ ಗೆದ್ದಿದೆ. ಮತ್ತೆ ಈಗ ಇವಳನ್ನು ನೋಡಿ ಸೋಲಲು ಅವನ ಮನಸ್ಸು ಒಪ್ಪುತ್ತಿಲ್ಲ. ತಾನು ಸೊಲು ಗೆಲುವಿನ ಜಿಜ್ನಾಸೆಗೇ ಇಲ್ಲಿಗೆ ಬಂದದ್ದೇ..? ಆದರೆ ಇವರನ್ನೆಲ್ಲಾ ನೋಡಿ ಅದ್ಯಾಕೆ ತನ್ನ ಮನಸ್ಸು ಸೋಲು-ಗೆಲುವನ್ನು ಅರಸುತ್ತಿದೆ. ಈ ಪ್ರಶ್ನೆ ಇಂದು ನಿನ್ನೆಯದಲ್ಲ. ತಾನು ಗೆಲ್ಲುತ್ತಿದ್ದೇನೆಯೇ ಅಥವಾ ಸೋಲುತ್ತಿದ್ದೇನೆಯೇ ಎಂಬ ಪ್ರಶ್ನೆ ತಾನು ಯಾರೊಂದಿಗೂ ಸ್ಪರ್ಧಿಸದೆಯೇ ಕೇಳಿಕೊಳ್ಳುತ್ತ ಬದುಕಿ ಆಗಿದೆ – ಹಾಗೆ ಬದುಕುತ್ತಿದ್ದಾಗಿದೆ.ಈಗ ಅವಳೊಬ್ಬಳ ಸೀರೆಯ ಸಂಧಿಯಲ್ಲಿ ಮೊಲೆ ನೋಡಿದ್ದಾನೆ – ಅದು ಇನ್ನಷ್ಟು  ಏನೇನೋ ಪ್ರಶ್ನೆಗಳನ್ನು ಕೆಣಕಿದೆ. ತನ್ನ ಎಲ್ಲ ಪ್ರಶ್ನೆಗಳು ಸ್ತ್ರೀಯ ಸುತ್ತ ಸ್ತ್ರೀ ಮೊಲೆಯ ಸುತ್ತ ಸುತ್ತಲು ಕಾರಣ ಏನಿರಬಹುದು ಎಂದು ಹಲವು ಬಾರಿ ಆತನನ್ನು ಆತ ಕೇಳಿಕೊಂಡಾಗಿದೆ. ಹುಟ್ಟಿದ ಮಗುವಿನ ಮೊದಲ ಸಂಸ್ಕಾರ ತಾಯಿಯ ಸ್ಥನದಿಂದ ಶುರುವಾಗುವುದರಿಂದ ಮನಸ್ಸು ಈ ರೀತಿ ತನ್ನನ್ನು ಕಾಡುತ್ತಿದೆ. ಮತ್ತೆ ಅಲ್ಲೇ ಎಲ್ಲೋ ಏನನ್ನೋ ಹುಡುಕುತ್ತಿದೆ. ಹಾಗಾದರೆ ಈ ಸಂಸ್ಕಾರ ತನಗೊಬ್ಬನಿಗೇ ಅಲ್ಲ. ಎಲ್ಲರಿಗೂ ಆಗಿರಲೇಬೇಕು. ತಾನು ಎಲ್ಲರಂತೇ ಸಾಮಾನ್ಯ-ಸಮ. ಪ್ರತಿಯೊಬ್ಬರಿಗೂ ಇದೆಲ್ಲಾ ಆಗುತ್ತಿರಬೇಕು.ಹೌದು. ಹಾಗಾದರೆ ಹೆಣ್ಣಿನ ಮನಸ್ಸು ಕೂಡ ಈ ಎಲ್ಲ ತುಮುಲಗಳಿಗೆ ಹೊರತಾಗಿಲ್ಲವೇ? ಹುಡುಗರ ಬಗ್ಗೆ ಆತನಿಗೆ ಗೊತ್ತು.  ಅವನ ಹೆಚ್ಚಿನ ಸ್ನೇಹಿತರಿಗೆಲ್ಲಾ ಈ ಪವಿತ್ರ ಸಂಸ್ಕಾರ – ತನಗಿಂತ ತುಸು ಜಾಸ್ತಿಯೇ ಅಚ್ಚೊತ್ತಿರುವುದು ಅವರು ಆಡುವ ರೀತಿಯಲ್ಲಿ-ಹಲವು ಸನ್ನಿವೇಶಗಳಲ್ಲಿ ನೋಡಿ ಆಗಿದೆ. ಹೆಣ್ಣಿನಲ್ಲಿ ಈ ಸಂಸ್ಕಾರದ ಬಗ್ಗೆ – ಇರುವ ಅಚ್ಚಿನ ಆಳದ ಬಗ್ಗೆ ಆತನಿಗೆ ಗೊತ್ತಿಲ್ಲ. ಇದನ್ನು ತಿಳಿಯದೇ ಸತ್ತ ಎಲ್ಲರ ಲಿಸ್ಟಿನಲ್ಲಿ ತಾನು ಸೇರಬಹುದು – ಸೇರಿ ಸತ್ತರೆ ಅವನಿಗೆ ಯಾವುದೇ ಆಶ್ಚರ್ಯವಿಲ್ಲ. ಒಟ್ಟರೆಯಾಗಿ ದೇವರ ಸುತ್ತ ಆ ಹೆಂಗಸರು – ಅವರ ಸುತ್ತ ಅವನ ಮನಸ್ಸು.. ಸುತ್ತಿ ಸುತ್ತಿ ಎಲ್ಲವೂ ಶೂನ್ಯ ಹುಡುಕುತ್ತಿದೆ.

Advertisements

7 thoughts on “ಸುತ್ತ ಸುತ್ತುತ್ತ…

  1. ಸುತ್ತ ಸುತ್ತುತ್ತ ಶಿಶಿರ್ ಪ್ರಾಮಾನಿಕತನವನ್ನು ಮೆರೆದಿದ್ದಾರೆ. ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ಸ್ವತಂತ್ರವಾಗಿ ವಿವರಿಸುತ್ತ ಹೋಗಿದ್ದಾರೆ. ದೇವರು ಮತ್ತು ಸ್ತ್ರೀ ವಿಚಾರದಲ್ಲಿ ವಿಮರ್ಶಾತ್ಮಕ ಯೋಚನೆಗಳನ್ನು ತಿಳಿಯಾಗಿ ವಿವರಿಸಿದ್ದಾರೆ. ಆವರ ಬರವಣಿಗೆ ಹೀಗೆ ಮುಂದುವರೆಯಲಿ ಹಾಗು ಹೊಸ ಹೊಸ ಬರವಣಿಗೆಯ ಅಯಾಮಗಳನ್ನು ಹೊರತರಲಿ ಎಂದು ಹಾರೈಸುತ್ತೆನೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s