ಮೂರೂರು – ಇಲ್ಲಿನ ದಿನವಿಡೀ ಮುಗ್ಧ

ಮೂರೂರಿನ ಪ್ರಕೃತಿಗೆ ಯವತ್ತೂ ಮುಗ್ಢತೆ ಇದೆ. ಇಲ್ಲಿನ ದಿನವಿಡೀ ಮುಗ್ಢ. ಮುಂಜಾನೆಗೆ ಇದ್ದ ಮುಗ್ಢತೆ ಬೆಳಕು ಹರಿದಂತೆ ಕರಗುವುದಿಲ್ಲ. ಈ ಮುಗ್ಧತೆಯನ್ನು ಸೂರ್ಯ ಕೂಡ ಕರಗಿಸಲಾರ. ಮುಂಜಾನೆಯ ಮಂಜು ಮತ್ತು ಊರಿನ ಎಲ್ಲಾ ಸೌದೆ ಒಲೆಗಳಿಂದ ಹೊರಟ ಹೊಗೆ ಎರಡೂ ಒಂದೇ ಒಳ್ಳೆಯ ಸ್ನೇಹಿತರೇ.ಈ ಹೊಗೆ ಮುಗ್ಢ ಮಂಜನ್ನು ಕರಗಿಸುವ ಜಗೊಜಿಗೆ ಹೋಗದೇ ಹಾಗೇಯೇ ಅದರೊಳಗೆ ಲೀನವಾಗುತ್ತದೆ..ಮತ್ತೆ ಮಂಜಿನ ಸಾಂಗತ್ಯದಿಂದ ಉತ್ಸಾಹ ತುಂಬಿಕೊಂಡು ಇನ್ನಷ್ಟು ಮೇಲೆ ಮೇಲೆ..ಅರಬ್ಬಿ ಸಮುದ್ರದಿಂದ ವಲಸೆ ಬಂದ ಮೋಡ ಅಲ್ಲೇ ಮೇಲೆ ಇದೇ ಹೋಗೆಗಾಗಿ ಕಾಯುತ್ತದೆ. ಹೊಗೆಗೆ ಮತ್ತು ಮೋಡಕ್ಕೆ ಅದೇನೋ ಬಂಧ. ಇದೇ ಮೋಡ ಸುರಿದ ಮಳೆಯಿಂದ ಬೆಳೆದ ಮರದಿಂದ ಹುಟ್ಟಿದ ಹೊಗೆಯದು. ಇವೆರಡರ ಗೋತ್ರ ಒಂದೇ ಎಂಬಂಥ ಸಂಬಂಧ. ಅದ್ಯಾವುದೋ ನಾಗರೀಕ ಪ್ರಪಂಚದಿಂದ ಹೊರಟು ಇನ್ಯಾವುದೋ ನಾಗರೀಕತೆಗೆ ‘ನಾಗರೀಕ’ರನ್ನು ಹೊತ್ತೊಯ್ಯುವ ಹೊಗೆ ವಿಮಾನ ಕೂಡ ಈ ಹೊಗೆಯನ್ನು ಏನೂ ಮಾಡಲಾರದು.ಈ ಹೊಗೆಯ ಔನ್ನತ್ಯವೇ ಅದು. ಒಟ್ಟಾರೆಯಾಗಿ ಇಲ್ಲಿನ ಹೊಗೆ ಹೊಗೆಯಲ್ಲ ಯಾಕೆಂದರೆ ಅದರಲ್ಲಿ ಹಗೆಯಿಲ್ಲ. ಎಲ್ಲಾ ಮನೆಯ ಹೊಗೆಯೂ ಕೂಡಿ ಮೇಲೇರುತ್ತವೆ-ಒಗ್ಗಟ್ಟಿನಿಂದ. ಅದರ ಮೂಲವಾದ ಬೆಂಕಿಗೆ ಬೆಳಕು ಶಾಖ ಗೊತ್ತು- ಸುಟ್ಟು ಕೂಡ ಗೊತ್ತು. ಆದರೆ ಅದು ಎಂದೂ ತನ್ನ ಪರಿಧಿಯನ್ನು ಮೀರಿಲ್ಲ. ಇಲ್ಲಿಯ ಗಾಳಿಯೂ ಅಷ್ಟೇ-ಯಾವುದನ್ನು ಇದು ಅಳಿಸಿ ಹಾಕದು. ಹೊಗೆ ವಿಮಾನ ದಾರಿಯಲ್ಲಿ ಬಿಟ್ಟು ಹೋದ ಹೊಗೆಯನ್ನೂ ಇದು ಅಳಿಸುವುದಿಲ್ಲ. ಗಾಳಿ ನೀರು ಬೆಳಕು ಗಿಡ ಮರ ಮತ್ತು ಮನುಷ್ಯ ಎಲ್ಲರೂ ಕೂಡಿ ಬದುಕುತ್ತಾರೆ-ಜಗಳವಿಲ್ಲದೆ.ಜಗಳವಾದರೂ ಮತ್ತೆ ಕೂಡಿ ಬದುಕಲು ಹೆಚ್ಚಿಗೆ ಸಮಯ ಬೇಡ. ಗಿಡಗಳಿಗೆ ಶಬ್ಧದಿಂದ ತಲೆನೋವು ಬರುವುದಿಲ್ಲ. ಗಾಳಿಗೆ ತನ್ನ ಶ್ವಾಸಕೋಶದ ಬಗ್ಗೆ ಚಿಂತೆಯಿಲ್ಲ. ಬೆಳಕಿಗೆ ಬೆವರಿಳಿಯುವುದಿಲ್ಲ-ಬೀಸದ ಗಾಳಿಗೆ ಅರಬ್ಬಿ ಸಮುದ್ರದಿಂದ ಬರುವ ಗಾಳಿ ಬಿಸಿಮುಟ್ಟಿಸುತ್ತವೆ. ಆಗ ಮಳೆ ಮಧ್ಯ ಪ್ರವೇಶಿಸಿ ಇಬ್ಬರನ್ನು ಸಮಾಧಾನ ಮಾಡುತ್ತದೆ. ಇಲ್ಲಿನ ಸೂರ್ಯನ ಬೆಳಕಿಗೆ ಬಂಡಿದೇವು – ಗೌಡ ಈಶ್ವರ – ನಿಂಗಿಮನೆ ಮಾದೇವ ಇಷ್ಟ. ಅವರೆಲ್ಲಾ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದರೆ -ತೊಂದರೆ ಕೊಡದೇ ಕದ್ದು ಕದ್ದು ಇಣುಕಿನೋಡಿ ತನ್ನಲ್ಲೇ ಖುಷಿಪಡುವ ಬೆಳಕು. ಗಾಳಿಗೆ ಗೌಡ ಈಶ್ವರನ – ನಿಂಗಿಮನೆ  ಮಾದೇವನ ಬೆವರಿನ ವಾಸನೆ ಚಿರಪರಿಚಿತ.

ಇನ್ನು ಕೆಲ ತೋಟಗಳಿಗೆ ಅವರ ಮಾಲಿಕರ ನೆನಪಿಲ್ಲ. ಅವರು ಬೇರೆ ಊರಿಗೆ ಹೋಗಿದ್ದಾರೋ ಅಥವಾ ಸತ್ತೇ ಹೋಗಿದ್ದಾರೋವರು ದೂರದ ಪೇಟೆಯ ಮಗನ ಮನೆಗೆ ಹೋಗುವಾಗ ತೋಟಕ್ಕೆ- ಅಡಿಕೆ ತೆಂಗಿನ ಮರಗಳಿಗೆ ಹೇಳಿಲ್ಲ. ಒಡೆಯರ ಪ್ರೀತಿಯ ಬಾಳೆಮರಕ್ಕೂ ವಿಷಯ ಗೊತ್ತಿಲ್ಲ. ಇನ್ನು ಉಳಿದ ಕೆಲ ತೋಟದ ಒಡೆಯರು ಇವತ್ತಿಗೂ ಬೆಳಿಗ್ಗೆ ಎದ್ದು ಮರಗಳಿಗೆ ನೀರುಣಿಸುತ್ತಾರೆ. ಅಲ್ಲಲ್ಲಿ ಅದ್ಯಾವುದೋ ಕಾಲದಿಂದ ಬತ್ತದೇ ಇರುವ ಕೆಲ ಕೆರೆಗಳನ್ನು ಸಮನಾಗಿ ತೋಟದ ವಿಸ್ತೀರ್ಣಕ್ಕೆ ತಕ್ಕಂತೆ ನೀರನ್ನು ಹಂಚಿಕೊಳ್ಳಲಾಗಿದೆ. ಪಾಳಿಯ ಪ್ರಕಾರ ವಾರದಿಲ್ಲಿ ಒಮ್ಮೆ ತೊಟಕ್ಕೆಲ್ಲಾ ಊಟ. ಕೆಲವೊಂದು ತೋಟಕ್ಕೆ ಅದರ ಒಡೆಯರು ಅದರ ನೀರಿನ ಪಾಳಿ ಬರುವ ವಾರದ ದಿನದ್ದೇ ಹೆಸರಿಟ್ಟಿದ್ದಾರೆ-ಮಂಗಳ ವಾರ ನೀರಿನ ಪಾಲು ಆ ತೋಟಕ್ಕೆ ಬಂದರೆ ಅದನ್ನು ‘ಮಂಗಳವಾರ ಪಾಲು’ – ಬುಧವಾರ ಪಾಳಿ ಇದ್ದ ತೋಟ ‘ಬುಧವಾರ ಪಾಲು’ ಹೀಗೆ.. ಯಾರ ಪಾಳಿ ನಾಳೆಯೋ ಅವರು ಇವತ್ತು ಸಂಜೆ ನಿಗದಿತ ಸಮಯದಲ್ಲಿ ಕೆರೆಯ ನೀರನ್ನು ಕಟ್ಟಿಹಾಕಿಕೊಳ್ಳಬೇಕು. ಮಾರನೆ ದಿನ ಬೆಳಿಗ್ಗೆ ಎಂಬಾಗ ಕೆರೆ ತುಂಬಿ ತೋಟಕ್ಕೆ ಊಟ ರೆಡಿ. ಕೆಲವರಿಗೆ ತೋಟ ಮತ್ತು ಕೆರೆ ಎರಡೂ ಹತ್ತಿರ. ಇನ್ನು ಕೆಲವರಿಗೆ ತುಸು ದೂರವೇ- ಬೆಳಕು ಹರಿಯುವುದರೊಳಗೆ ಕೆರೆಯ ನೀರು ಬಿಟ್ಟುಕೊಂಡರೆ ಮುಂದಿನ ಪಾಳಿಯವ ಕೆರೆ ಕಟ್ಟುವ ಮೊದಲು ಎಲ್ಲಾ ಮರಗಳಿಗೆ ನೀರುಣಿಸಬಹುದು. ಇಲ್ಲದಿದ್ದರೆ ಕೊನೆಯಲ್ಲಿ ಇರುವ ಕೆಲ ಮರಗಳಿಗೆ ಮತ್ತೊಂದು ವಾರ ಉಪವಾಸ.  ನಸುಗತ್ತಲಲ್ಲೇ ಹೊರಡುವ ಒಡೆಯನಿಗೆ ಬರುವಾಗ ಕಾಲಿನ ಹೆಬ್ಬೆರಳಿಗೆ ರಸ್ತೆಯಲ್ಲಿ ಬಡಿದ ಕಲ್ಲು ಗಮನಕ್ಕೇ ಇಲ್ಲ. ಅದು ಅವನನ್ನು ನಿಲ್ಲಿಸಲು ವ್ಯರ್ಥ ಪ್ರಯತ್ನ-ಅವ ನಿಲ್ಲಲಾರ. ಕೆರೆಯ ನೀರನ್ನು ಬಿಡಲು ಇಳಿದಾಗ ರಕ್ತ ತೊಳೆದು ಹೋಗುತ್ತದೆ-ಗಾಯ ಕೆರೆಯ ಕೆಸರಿನಿಂದ ಮುಚ್ಚಿಹೋಗುತ್ತದೆ.

ಅಲ್ಲಿ ದೇವರನ್ನು ಎಬ್ಬಿಸಲು ಮೈಕ್-ಲೌಡ್ ಸ್ಪೀಕರುಗಳ ಅಬ್ಬರ ಬೇಕಿಲ್ಲ. ಒಂದು ಗಂಟೆ-ಶಬ್ಧ ಸಾಕು. ಕಿವಿ ತೂತಾಗುವ ಮೈಕ್ ಹಚ್ಚಿ ದೇವರನ್ನು ಬೆಚ್ಚುವಂತೆ ಮಾಡಿ ಅವನನ್ನು ಹೆದರಿಸಿ ನಮಗೆ ಬೇಕಾದ್ದನ್ನು ಅವನಿಂದ ಕಿತ್ತುಕೊಳ್ಳುವವರು ಅಲ್ಲಿಲ್ಲ. ಅಲ್ಲಿ ದೇವರು ಬೆಳಿಗ್ಗೆ ನಾಲ್ಕಕ್ಕೇ ಏಳುವುದಿಲ್ಲ. ಆತ ಅಲ್ಲಿ ಸ್ವಲ್ಪ ಫ್ರೀ. ಅರಾಮಾಗಿ ೯-೧೦ ಘಂಟೆಗೆ ಸ್ನಾನ ಮಾಡಿಕೊಂಡು ಫ್ರೆಶ್ ಆಗುತ್ತಾನೆ-ಸ್ವಚ್ಛ ನೀರಿನಲ್ಲಿ.ಆತನಿಗೆ ಇಲ್ಲಿನ ಜನರ ಮೇಲೆ ಅಪಾರ ನಂಬಿಕೆ. ಅವರನ್ನು ವಾಚ್ ಮಾಡುವ ವಾಚ್-ಮೆನ್ ಕೆಲಸ ಮಾಡುವ ಅವಶ್ಯಕತೆಯಿಲ್ಲ. ಏನಾದರೂ ಬೇಕಾದರೆ ದೇವಸ್ಥಾನಕ್ಕೆ ಬಂದು ಗಂಟೆ ಬಾರಿಸಿದರೆ ದಡಬಡಾಯಿಸಿ ಎದ್ದು ಕೇಳಿದ್ದನ್ನು ಕೊಟ್ಟು ಮತ್ತೆ ವಿಶ್ರಾಂತಿಗೆ ಜಾರುತ್ತಾನೆ. ನೆಮ್ಮದಿಯಿಂದ ಇರುವವರು ಇನ್ನೆಂಥಾ ದೊಡ್ಡದನ್ನು ಕೇಳಿಯಾರು-ಎಂಬುದು ಅವನಿಗೆ ಗೊತ್ತು. ಇನ್ನು ಅವರು ಕೊಟ್ಟಿದ್ದನ್ನು ದುರ್ಬಳಕೆ ಮಾಡುವವರಲ್ಲ. ಅವರು ಕೇಳುವ ಎಲ್ಲವೂ ದೇವರ ಕೈಗೆಟಕುವ ಅಹವಾಲುಗಳೇ ..

ಬೆಳಿಗ್ಗೆ ಬೆಳಿಗ್ಗೆ ನಾಗರೀಕ ಪ್ರಪಂಚದಿಂದ ಹೊರಟು ಬರುವ ಕೃಷಿ ಸಂಬಂಧಿತ TV ಕಾರ್ಯಕ್ರಮಗಳು – ಅದರಲ್ಲಿ ಬರುವ ಹಲವು ವಿಚಾರಗಳು ಕಾಜನ ಬೀರನಿಗೂ ಗೊತ್ತು – ಇನ್ನು ಕೆಲ ವಿಚರಗಳು ಗೊತ್ತಿಲ್ಲದವೂ ಇವೆ. ಅವನಿಗೆ ಸೋಡಿಯಂ ಕ್ಲೋರೈಡ್ ಗೊತ್ತಿಲ್ಲ – ಆದರೆ ಗೊಕರ್ಣದ ತದಡಿಯ ಹತ್ತಿರ ತಯಾರಿಸುವ ಶುದ್ಧ ಉಪ್ಪು ಗೊತ್ತು. ಮೈಲು ತುತ್ತೆ ಗೊತ್ತು ಆದರೆ ಪೊಟ್ಯಾಷಿಯಂ ಸಲ್ಫೇಟ್ ಗೊತ್ತಿಲ್ಲ. ಮರಗಳಿಗೆ ಬರುವ ಬಹುತೇಕ ರೋಗಗಳು ಗೊತ್ತು – ಅವಕ್ಕೆ ಹೇಗೆ ಉಪಚಾರ ಮಾಡಬೇಕೆಂದು ಅವನ ಅಜ್ಜ ಹೇಳಿದ್ದು ನೆನಪುಂಟು. ಅವನಿಗೆ ಈ TV ಕಾರ್ಯಕ್ರಮದಿಂದ ಅದೇನನ್ನು ಕಲಿಯುವುದಿಲ್ಲ.TV ಕಾರ್ಯಕ್ರಮದವರು ಅದ್ಯಾವುದೋ ಕೃಷಿ ವಿದ್ಯಲಯದಿಂದ ಬಾಡಿಗೆಗೆ ತಂದ ಪುಸ್ತಕದಿಂದ ಓದಿ ಹೇಳುವ ರಸಾಯನಿಕಗಳಲ್ಲಿ ಬಹುತೇಕ ಎಲ್ಲವಕ್ಕೂ ಗ್ರಾಮ್ಯದಲ್ಲಿ ಇನ್ನೊಂದು ಅನ್ವರ್ಥವಿದೆ. ಅದುಾ ಪುಸ್ತಕದಲ್ಲಿ ನಮೂದಿಸಿಲ್ಲ. ಹಗಾಗಿ ಈ ಕಾರ್ಯಕ್ರಮದ ಲವಲೇಶವೂದೂರದ ನಮ್ಮೂರಿಗೆ ಅರ್ಥವಾಗುವುದೇ ಇಲ್ಲ- ತಲುಪುವುದೂ ಇಲ್ಲ. ಈ ಕಮ್ಯುನಿಕೇಶನ್ ಗ್ಯಾಪ್ ಅನ್ನು ತುಂಬಿಕೊಡುವ ತಾಕತ್ತು ದೂರದ ‘ನಾಗರೀಕ’ ಪ್ರಪಂಚಕ್ಕಂತು ಇಲ್ಲವೇ ಇಲ್ಲ.ಅವರು ಹೇಳುವುದು ಥಿಯೇರಿ – ನಮ್ಮೂರಿನ ಜನರು ಪ್ರಾಕ್ಟಿಕಲ್ಲಿನಲ್ಲಿ ನಿಷ್ಣಾತರು. ಹೇಗೆ ಲೆಕ್ಚರಿಗಿಂತ (ಅಧ್ಯಾಪಕರಿಗಿಂತ) ಲ್ಯಾಬ್ ಅಟೆಂಡರಿಗೇ ಹೆಚ್ಚು ಪ್ರಾಕ್ಟಿಕಲ್ಲಿನಲ್ಲಿ ಜ್ನಾನವಿರುತ್ತದೋ ಹಾಗೆಯೇ ಇಲ್ಲಿ.

ಇಲ್ಲಿ ಖುಷಿ ಜೀವನದ ಬಹುತೇಕ ಭಾಗವನ್ನು ಆವರಿಸಿದೆ. ಖುಷಿಯನ್ನು ಜೀವನದಿಂದ ಬೇರ್ಪಡಿಸಿ ಗೊತ್ತೇ ಇಲ್ಲ. ಖುಷಿಯನ್ನು ಗುರುತಿಸಲಾರದಷ್ಟು ಜನ ಅದಕ್ಕೆ ಒಗ್ಗಿಕೊಂಡಿದ್ದಾರೆ.ದೂರದ ‘ನಾಗರೀಕ’ ಪ್ರಪಂಚ ಖುಷಿಯನ್ನು ಹುಡುಕುತ್ತಿದೆ ಮರುಭೂಮಿಯಲ್ಲಿ ನೀರ ಹುಡುಕಿದಂತೆ- ಮರುಭೂಮಿಯಿಂದ ಹೊರಗೆ ಬಂದರೆ ಮಾತ್ರ ನೀರು ಎನ್ನುವುದು ಗೊತ್ತಿದೆ-ಆದರೆ ಹೊರಗೆ ಬರುವಷ್ಟು ತ್ರಾಣವಿಲ್ಲವಾಗಿದೆ.

ಆಧುನಿಕತೆ ನಮ್ಮನ್ನು ಅಲ್ಪತನಕ್ಕೆ ಸೆಳೆದು – ಎಳೆದು ಬಡಿದು ಒಯ್ದಾಗಿದೆ- ಕಸಿದುಕೊಂಡದ್ದೇ ಜಾಸ್ತಿ. ಹಳ್ಲಿಯಿಂದ ಬರುವ ಫಾರ್ಮ್ ಫ್ರೆಷ್ ಯತರಕಾರಿ ಇತ್ಯಾದಿಗಳನ್ನು ನಾಗರೀಕರು ಸರತಿಯಲ್ಲಿ ನಿಂತು ಕಚ್ಚಾಡಿ – ಕಸಿದು ಹಲ್ಲು ಕಿಸಿದು ತಿನ್ನುತ್ತಾರೆ. ಆರೋಗ್ಯಕ್ಕೆ ಈಗ ನಾಗರೀಕರು ಹಸಿ ಸೊಪ್ಪು ತಿನ್ನಬೇಕು-ಆದಿ ಮಾನವರಂತೆ. ಹಸಿ ಸೊಪ್ಪು ಪಿಜ್ಜಾ ಹಟ್ಟಿನಲ್ಲಿ ಮಾರುವುದಿಲ್ಲ. ಪಿಜ್ಜಾ ದೂರದ ನಮ್ಮೂರಿಗೆ ಕಾಲಿಡುವುದಿಲ್ಲ. ಹಾಗಾಗಿ ಅಲ್ಲಿ ಎಲ್ಲರೂ ಆರಾಮ್. ಜಾಗ್ಗಿಂಗು ಇವೆಲ್ಲಾ ಬೆಳಿಗ್ಗಿನ ನೀರು ಬಾರಿಯಲ್ಲೇ ಆಗಿಬಿಡುತ್ತದೆ. ತೋಟವೇ ಪಾರ್ಕು. ತೋಟವೇ ಜಿಮ್ಮು ಎಲ್ಲಾ. ನಮ್ಮೂರಿನಂಥ ಹಲವು ಊರಿಗಳಿಂದ ತರಕಾರಿ ಇವೇಮೊದಲಾದ ಆರೊಗ್ಯವನ್ನು ಪೇಟೆಗೆ ನಗರಕ್ಕೆ ನಾಗರೀಕರಿಗೊಸ್ಕರ ಆರೊಗ್ಯಕ್ಕೆ ತರಲಾಗುತ್ತದೆ. ಅದಕ್ಕೆ ಉತ್ತರದಂತೆ ಸ್ವಲ್ಪ ಪ್ರಮಾಣದ ಅನಾರೊಗ್ಯವನ್ನು ನಗರದಿಂದ ಹಳ್ಳಿಗೆ ಒಯ್ಯಲಾಗುತ್ತದೆ.ಅದ್ಯಾವುದೂ ಕಾಜನ ಬೀರನನ್ನು-ನಿಂಗಿ ಮನೆ ಮಾದೇವನ ಆರೋಗ್ಯವನ್ನು ಕೆಡಿಸಿಲ್ಲ.ತರಕಾರಿ – ಹಣ್ಣು ಇತ್ಯಾದಿಗಳ ರೇಟು ಏರಿದಂತೆ ಹಳ್ಳಿಗೆ ಪೇಟೆಯಿಂದ ರವನಿಸಲ್ಪಡುವ ಅನಾರೋಗ್ಯದ ಪ್ರಮಾಣವೂ ಏರುತ್ತದೆ ಎನ್ನುವುದು ನಮ್ಮೂರಿನವರಿಗೆ ಗೊತ್ತಿಲ್ಲದೇ ಹೊಗಿಲ್ಲ. ಇಲ್ಲಿ ನಮ್ಮೂರಿನಲ್ಲಿ ಎಲ್ಲವೂ ತ್ರಪ್ತ ಸಂತ್ರಪ್ತ.

 

(ಹಾಗೆಯೇ ‘ಸುತ್ತ ಸುತ್ತುತ್ತ’ ಓದಿ. ಒಂದೆರ್ಡು ಸಾಲು ಲೇಖನ ಹೇಗಿದೆ ಎಂದು ಬರೆದರೆ – comments ಕೊಟ್ರೆ ತುಂಬಾ ಖುಷಿ.)
-ಮೂರೂರು

Advertisements

8 thoughts on “ಮೂರೂರು – ಇಲ್ಲಿನ ದಿನವಿಡೀ ಮುಗ್ಧ

  1. ಶಿಶಿರಾ, ರಾಶಿ ಕುಶೀ ಆತು ನಿನ್ನ BLOG ಓದಿ. ಊರಿಂದ ಬಂದು ಸುಮಾರು ೬ ತಿಂಗ್ಳು ಆಗ್ತೆ ಬಂತು ನಾನು. ಊರಬದಿಗೆ ಪುಕ್ಕಟ್ಟೆ ಹೊಗಿ ಬಂದಹಾಂಗೆ ಆತು! ಬರೀತೆ ಇರು…… ಚೈತ್ರಾ 🙂

  2. ಮುರೂರು ನನ್ನ ಹುಟ್ಟೂರು. ಸಾಫ್ಟ್ ವೇರ್ ಎಂಬ ಮಾಯಾ ಜಿಂಕೆಯ ಬೆನ್ನು ಹತ್ತಿರುವ ನಾವು ವರ್ಷಕ್ಕೆ ಒಮ್ಮೆಯೂ ಊರಿಗೆ ಹೋಗುವುದು ಕಷ್ಟ. ನಿಮ್ಮ ಇ ಲೇಖನ ಬಾಲ್ಯದ ನೆನಪುಗಳನ್ನು ಮತ್ತೆ ಕಣ್ಣ ಮುಂದೆ ತಂದು ನಿಲ್ಲಿಸಿವೆ. ಧನ್ಯವಾದಗಳು ……

    with Regards…..
    ಗಜಾನನ …

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s