ಮಾದೇಶಾ…ನಾವು ಗಾಯತ್ರಿ ಮಂತ್ರ ಕೇಳಿ ವಿಸಿಲ್(ಶಿಳ್ಳೆ) ಹಾಕುತ್ತೇವೆ!

ನಾವು ಗಾಯತ್ರಿ ಮಂತ್ರ ಕೇಳಿ ವಿಸಿಲ್(ಶಿಳ್ಳೆ) ಹಾಕುತ್ತೇವೆ!

ಮಾದೇಶನಾಗಿ ಶಿವರಾಜ್ ಕುಮಾರ್
ಮಾದೇಶನಾಗಿ ಶಿವರಾಜ್ ಕುಮಾರ್

ಏನಾಗಿದೆ ಇವರಿಗೆಲ್ಲಾ??? ಇಲ್ಲಿನ ಹೀರೊ(ನಾಯಕ) ಶುದ್ಧ ಗೂಂಡಾ. ಯಾವುದೇ ಆದರ್ಶಗಳಿಲ್ಲದ ಪಾತ್ರ ನಾಯಕನದು.ನಾಯಕ ಹಳ್ಳಿಯಲ್ಲಿ ತನ್ನ  ತಾಯಿಯ ಬಗ್ಗೆ ಒಬ್ಬ ಅವಾಚ್ಯವನ್ನು ಆಡಿದ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಿ ಜೈಲು ಸೇರುತ್ತಾನೆ. ನಂತರ ಜೈಲಿನಿಂದ ಹೊರಬಂದವ ಬೆಂಗಳೂರಿಗೆ ಸೇರಿಕೊಳ್ಳುತ್ತಾನೆ. ಆತನ ಮಹತ್ವಾಕಾಂಕ್ಷೆ ಬೆಂಗಳೂರಿನ ಭೂಗತ ಜಗತ್ತಿಗೆ ಒಡೆಯನಾಗಬೇಕು ಎಂಬುದು.ಇದಕ್ಕಾಗಿ ಹಲವು ಕೊಲೆ – ಲೂಟಿ. ಮೊದಲ ಕೊಲೆ ಒಂದು ಪೆಟ್ರೋಲ್ ಬಂಕಿನಲ್ಲಿ ನಡೆಯುತ್ತದೆ. ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತ ಬೆಂಗಳೂರಿನ ಆರಂಭದ ದಿನಗಳನ್ನು ಮಾದೇಶ ಕಳೆಯುತ್ತಿರುತ್ತಾನಾದರೂ, ಆತನ ಆಸೆ ಒಂದು ದೊಡ್ಡ ಕ್ರಿಮಿನಲ್ ಕುಳ ಆಗಬೇಕೆನ್ನುವುದು – ಭೂಗತ ಜಗತ್ತಿನ ಒಡೆಯನಾಗಬೇಕೆನ್ನುವುದು. ಅದನ್ನೇ ಉದ್ದೇಶವಾಗಿರಿಸಿಕೊಂಡು ಮೊದಲ ಕೊಲೆ ಆಗುತ್ತದೆ. ಮಾದೇಶ ಎಂಬ ಕ್ರಿಮಿನಲ್ ಒಂದು ಕ್ರಿಮಿನಲ್ ಗುಂಪನ್ನು ಹೊಡೆದು “ಸಂಹಾರ” ಮಾಡುತ್ತಾನೆ. ವಿಪರ್ಯಾಸವಿರುವುದೂ ಇಲ್ಲಿಯೇ!! ಈ ಹೊಡೆದಾಟವನ್ನು ಕೃಷ್ಣ – ಕಂಸ ವಧೆ ಮಾಡುವಂತೆ, ರಾಮ ರಾವಣನ ವಧೆ ಮಾಡುವಂತೆ ಚಿತ್ರಿಸಿಲಾಗಿದೆ. ಹಿಂದುಗಳಿಗೆ ಅತ್ಯಂತ ಪವಿತ್ರ ಮಂತ್ರ ಗಾಯತ್ರಿ ಮಂತ್ರ. ಇದನ್ನು ಹಿನ್ನೆಲೆ ಸೌಂಡ್ ಆಗಿ ಕೊಟ್ಟ ನಿರ್ದೇಶಕರನ್ನು ಹೇಗೆ ಹೊಗಳಬೇಕೋ ನಿಮಗೆ ಬಿಟ್ಟದ್ದು. ಒಬ್ಬ ಕ್ರಿಮಿನಲ್ ಇನ್ನೊಬ್ಬ ಕ್ರಿಮಿನಲ್ ಅನ್ನು ಕೊಲ್ಲುತ್ತಿರುತ್ತಾನೆ ಮತ್ತೆ ಹಿನ್ನೆಲೆಯೆಲ್ಲಿ ಗಾಯತ್ರಿ ಮಂತ್ರ!!ಅದನ್ನು ನೋಡಿ ಜನ ಶಿಳ್ಳೆ ಹೊಡಿಯುತಾರೆ.

 

ವ್ಹಾ… ಸಲಾಮ್ ಮಹಾನ್ ನಿರ್ದೇಶಕ ರವಿ ಶ್ರೀವತ್ಸ ಅವರಿಗೆ..

ರವಿ ಶ್ರೀವತ್ಸ - ನಮೋನ್ನಮಹ ನಿಮಗೆ..
ರವಿ ಶ್ರೀವತ್ಸ - ನಮೋನ್ನಮಹ ನಿಮಗೆ..

ಸಾಷ್ಟಾಂಗ ನಮಸ್ಕಾರ ನಿಮಗೆ. ನಿಮಗೆ ಗಾಯತ್ರಿ ಮಂತ್ರದ ಮಹಿಮೆ ಏನು ಎಂದು ಗೋತ್ತಿಲ್ಲದಿದ್ದರೆ ನನಗೆ ಬರೆಯಿರಿ! ನಾನು ಹೇಳುತ್ತೇನೆ. ಈರೀತಿ ಗಾಯತ್ರಿ ಮಂತ್ರವನ್ನು ಬಳಸಿಕೊಂಡಿರುವುದು ತೀರಾ ಅಸಹನೀಯ. ಗಾಯತ್ರಿ ಮಂತ್ರಕ್ಕೆ ಅದರದೇ ಆದ ಪಾವಿತ್ರ್ಯತೆ ಇದೆ. ಹಿಂದುಗಳಿಗೆ ಇದು ಅತ್ಯಂತ ಪವಿತ್ರ  ಮಂತ್ರ. ಋಗ್-ಯಜುರ್ವೇದಗಳು ಇದರ ಮೂಲ ಎನ್ನಲಾಗಿದೆ. ಗಾಯತ್ರಿ ಮಂತ್ರ ಎಲ್ಲಾ ನಾಲ್ಕು ವೇದಗಳಲ್ಲಿಯೂ ಇರುವ ಮಂತ್ರ( ಅಥರ್ವ ವೇದದಲ್ಲಿ ಗಾಯತ್ರಿ ಮಂತ್ರ ಬೇರೆ ತೆರನಾಗಿದೆಯಂತೆ!). ಇದರ ಉಚ್ಛಾರಕ್ಕೆ ಉಪದೇಶವಾಗಬೇಕು ಎಂಬುದು ವೇದೋಕ್ತಿ. ಗಾಯತ್ರಿ ಮಂತ್ರ “ಸವಿತೃ” ದೇವತೆಗೆ ಸಂಭಂದಿಸಿದ್ದು. ಸವಿತ್ ಎಂದರೆ ಸೂರ್ಯ. ಸೂರ್ಯ ಎಂದರೆ ನಮ್ಮ ಸೌರ ಮಂಡಲದ ಸೂರ್ಯನಲ್ಲ. ಈ ಸೂರ್ಯ ಎಲ್ಲ ಸೂರ್ಯಗಳಿಗೆ ಸೂರ್ಯ. ಈತ ಅನಂತ ಶಕ್ತಿಯನ್ನು ನೀಡುವ ಸೂರ್ಯ. ಹಿಂದುಗಳಿಗೆ ಗಾಯತ್ರಿ  ಮನಸ್ಸನ್ನು – ಆತ್ಮವನ್ನು ಶುದ್ಧಗೊಳಿಸುವ ಚೇತನ.

ಒಟ್ಟಾರೆಯಾಗಿ ನಿರ್ದೇಶಕರು ತಮ್ಮ ಬುದ್ದಿಗೇಡಿತನವನ್ನು ಇಲ್ಲಿ ಮೆರೆದಿದ್ದಾರೆ. ರವಿ ಶ್ರೀವತ್ಸರೇ ನಿಮ್ಮ ಹೆಸರಿನಲ್ಲೂ ರವಿ-ಸವಿತೃ ಇದೆ – ಅದರ ಅರ್ಥವನ್ನು ಮೊದಲು ಚೆನ್ನಾಗಿ ಅರಿತುಕೊಳ್ಳಿ.ಹಿಂದುಗಳ ಮೌನವೇ ನಿಮ್ಮ ಬಂಡವಾಳವಾದರೆ ನಿಮಗೆ ಧಿಕ್ಕಾರ.

-ಹೆಗಡೆ

ವಿಕಿಪೀಡಿಯಾ ದಿಂದ:

******************************************************
ॐ भूर्भुवः स्वः ।
तत् सवितुर्वरेण्यं ।
भर्गो देवस्य धीमहि ।
धियो यो नः प्रचोदयात् ॥

Word-by-word explanation:-

om The mystical Om syllable.
bhū “earth”prithvi
bhuvas “atmosphere”antariksha
svah “light, heaven”beyond antariksha
tat “that”
savitur devasya “of Savitr, the god” (genitives of savitr-, ‘stimulator, rouser; name of a sun-deity’ and deva- ‘god’ or ‘demi-god’)
varenyam accusative of varenya- “desirable, excellent, fit to be adopted”
bhargo “radiance, lustre, splendour, glory”
devasya “divine”
dhīmahi “may we attain” (1st person plural middle optative of dhā- ‘set, bring, fix’ etc.)
dhiyaḥ naḥ “our prayers” (accusative plural of dhi- ‘thought, meditation, devotion, prayer’ and naḥ enclitic personal pronoun)
yaḥ pracodayāt “who may stimulate” (nominative singular of relative pronoun yad-; causative 3rd person of pra-cud- ‘set in motion, drive on, urge, impel’)
*******************************************************

Advertisements

3 thoughts on “ಮಾದೇಶಾ…ನಾವು ಗಾಯತ್ರಿ ಮಂತ್ರ ಕೇಳಿ ವಿಸಿಲ್(ಶಿಳ್ಳೆ) ಹಾಕುತ್ತೇವೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s