ಪಾಕಿಸ್ತಾನದಲ್ಲಿ – ಪಕ್ಕದ ಮನೆಯಲ್ಲಿ ಅಮ್ಮ!

ಪಕ್ಕದ ಮನೆಯ ಜಗುಲಿ
ಪಕ್ಕದ ಮನೆಯ ಜಗುಲಿ

ಅಲ್ಲಿ ಎಲ್ಲವೂ ಹೀಗೆಯೇ,,, ಅರಾಜಕತೆ ಇಲ್ಲದೆ ಬದುಕಿಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಅಲ್ಲಿ ಹೆಣ್ಣಿಗೆ ಬೆಲೆ ಇಲ್ಲ. ಬೆಲೆ ಕಟ್ಟುವವರೂ ಇಲ್ಲ. ಅಲ್ಲಿ ಎಲ್ಲ ಮುಫ್ತ್ ಎನ್ನುವ ವಾತಾವರಣ. ಎಲ್ಲಿ ಹೆಣ್ಣಿಗೆ ಬೆಲೆ ಇಲ್ಲವೋ ಅಲ್ಲಿ ಸಂಸ್ಕೃತಿಯ ಸರ್ವನಾಶ ಎನ್ನುವುದಕ್ಕೆ ಪಾಕಿಸ್ತಾನಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ. ನಮ್ಮಲ್ಲಿ ಹೆಣ್ಣು ಪೂಜನೀಯ. ಅಲ್ಲಿ ಆಕೆಯ ಬಗ್ಗೆ ಇಲ್ಲ ಎಳ್ಳಷ್ಟೂ ಕಾಳಜಿ. ಪಾಕಿಸ್ತಾನದ ಮಾನವೀಯ ಮೌಲ್ಯದ ಅವನತಿಯ ಮೂಲ ಹುಡುಕುತ್ತ ಹೋದರೆ ಎಲ್ಲರೂ  ಕೊನೆಯಲ್ಲಿ ಬಂದು ನಿಲ್ಲುವುದು ಇಲ್ಲಿಗೆ ಎಂದೆನಿಸುತ್ತದೆ.”ಯತ್ರ ನಾರ್ಯಾಣಿ ಪೂಜ್ಯಂತಿ, ತತ್ರ ರಮಂತೆ” ಎಂಬ ಮಾತಿದೆ. “ಅಮ್ಮ ಮೊದಲ ಪಾಠಶಾಲೆ”. ಆದರೆ ಎಲ್ಲಿ ಅಪ್ಪನೇ( ಅಷ್ಟೇ ಏಕೆ ಇಡೀ ಸಮಾಜವೇ) ತನ್ನ ಅಮ್ಮನಿಗೆ ಬೆಲೆಕೊಡುವುದಿಲ್ಲವಾದಾಗ ಅಲ್ಲಿ ಯಾವ ಮಗು ತಾನೆ ಅಮ್ಮನಿಗೆ ಬೆಲೆ ಕೊಟ್ಟೀತು? ಅಲ್ಲಿ “ಮಾತೆ”ಯ  ಮಾತಿಗೆ ಬೆಲೆ ಇಲ್ಲ. “ಮಾತೆ”  ಮಾತೇ ಆಡುವಂತಿಲ್ಲ. ಪಾಕಿಸ್ತಾನಿಗಳು ಹೆಣ್ಣನ್ನು ನಡೆಸಿಕೊಳ್ಳುವ ರೀತಿ ಇಡೀ ಮಾನವ ಕುಲ ತಲೆತಗ್ಗಿಸುವ ರೀತಿಯದು.

ಕರಾಚಿಯಲ್ಲಿ ಹೆಣ್ಣು ಅತಂತ್ರ. ನಿಜವಾದ ಅರ್ಥದಲ್ಲಿ ಅಬಲೆ.ಅಲ್ಲಿ ಪ್ರತೀದಿನ ನಡೆಯುವ ಸರಾಸರಿ “ರೇಪ್”(ಅತ್ಯಾಚಾರ)ದ ಸಂಖ್ಯೆ ಸರಿಸುಮಾರು “೧೦೦”.ದಿನವೋಂದಕ್ಕೆ ಸರಾಸರಿ ೧೦೦.. ಅದರಲ್ಲಿ ಬಹುತೇಕ ಎಲ್ಲ ಯುವತಿಯರು ವೃತ್ತಿನಿರತರು. ಅಲ್ಲಿನ ನ್ಯಾಯಂಗ ವ್ಯವಸ್ಥೆಯ ಅಧೋಗತಿ ಎಷ್ಟೆಂದರೆ, ಎಲ್ಲಿನೆ ಶೇಕಡಾ ೦.೫ ರಷ್ಟು ಇಂಥಹ ಘಟನೆಗಳು ಮಾತ್ರ ಪೋಲೀಸರ ಗಮನಕ್ಕೆ ಬರುತ್ತವೆ, ಇನ್ನುಳಿದವು ಹಾಗೇ ಮಣ್ಣಾಗಿ ಕರಗಿಹೋಗುತ್ತವೆನ್ನುವುದೇ ವಿಪರ್ಯಾಸ.ಇದನ್ನು ಸ್ವತ: ಜುಲ್ಫಿಗರ್ ಸಿಯಾಲ್ – ಪಾಕ್ ಪೋಲೀಸ್ ವರಿಷ್ಠರೇ ಒಪ್ಪಿಕೊಳ್ಳುತ್ತಾರೆ.ಅವರು ಹೇಳುತ್ತಾರೆ “ನನಗೆ ಭರವಸೆ ಇದೆ – ಪ್ರತೀ ದಿನಕ್ಕೆ ರೇಪ್ ೧೦೦ ಅನ್ನು ದಾಟುವುದಿಲ್ಲ!!”.

ಹಾಗಾದರೆ ಹೇಗಿರಬಹು ಅಲ್ಲಿನ ಪರಿಸ್ಥಿತಿ!ಅಲ್ಲಿ ತಾಯಿ ನಿತ್ಯ ಭಯೋತ್ಪಾದನೆಗೊಳಗಾಗುತ್ತಾಳೆ. ಹೀಗಿದೆ ನೋಡಿ ನಮ್ಮ ಪಕ್ಕದಮನೆ.

– ಶಿಶಿರ ಹೆಗಡೆ ಮುರೂರು.

3 thoughts on “ಪಾಕಿಸ್ತಾನದಲ್ಲಿ – ಪಕ್ಕದ ಮನೆಯಲ್ಲಿ ಅಮ್ಮ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s