ನಾವೇ ಮಾಡಿಕೊಂಡದ್ದು..ಇಂದಿನ ಸಾಫ್ಟ್ ಜಗತ್ತು

ನಾವೇ ಮಾಡಿಕೊಂಡದ್ದು..
ಇವತ್ತಿನ ಯಾವುದೇ ದಿನ ಪತ್ರಿಕೆಯನ್ನು ನೋಡಿ, ಯಾವುದಾದರು ಒಂದು ಮೂಲೆಯಲ್ಲಿ “Pink Slip For ___ employees” ಎನ್ನುವ ತಲೆಬರಹವಿರುವ ಸುದ್ಧಿ ನಿಮಗೆ ಕಾಣಸಿಗುತ್ತದೆ. ಇಂದಿನ ಸಾಫ್ಟ್ ವೇರ್ ಕಂಪನಿಯ ರುದ್ರ ರೂಪವಿದು. ಇಲ್ಲಿ ಯಾರನ್ನು ಯಾವಾಗ ಬೇಕಾದರು ತೆಗೆದು ಹಾಕಬಹುದು. ಯಾರೂ “ಯಾಕೆ?” ಎಂದು ಕೇಳುವಂತಿಲ್ಲ. ಕಾರಣವನ್ನು ಯಾರಿಗೂ ಹೇಳುವ ಅವಶ್ಯಕತೆ ಅವರಿಗಿಲ್ಲ. ಇಲ್ಲಿ ಯಾರು ಅವರವರ ಬಾಸ್ ಗಳಿಗೆ ಸಲಾಮು ಹಾಕಿಕೊಂಡು ಇರುತ್ತರೋ ಅವರು ಬದುಕುವ ಸಾಧ್ಯತೆ ಜಾಸ್ತಿ. ಜೀತದ ಆಳು ಇಂದಿನ ಸಫ್ಟ್ ವೇರ್ ಇಂಜಿನೀಯರ್. ಇದು ನಿಜವಾದ ಕಥೆ. ಇದರಲ್ಲಿ ಯಾವುದೇ ಅತಿಷಯೋಕ್ತಿಯಿಲ್ಲ.ಎಲ್ಲರೂ ಹೇಳುತ್ತಾರೆ – ಯಾರು ಕೆಲಸ ಮಾಡುವುದಿಲ್ಲವೋ ಅವರನ್ನು ಕೆಲಸದಿಂದ ತೆಗೆದುಹಾಕುತ್ತರೆ ಎಂದು, ಆದರೆ ನಿಜವಾದ ಸಂಗತಿಯೇ ಬೇರೆ. ಯುನೈಟೆಡ್ ಸ್ಟೇಟ್ಸ್ ಮೊದಲಾದ ದೇಶಗಳಿಂದ ಈ ಸಫ್ಟ್ ವೇರ್ ಕಂಪನಿಗಳಿಗೆ ಬರುವ ಆದಾಯ ಈಗ ಕಡಿಮೆ ಆಗಿರುವುದು ಇದರ ಮೂಲ ಕಾರಣ. ಕೆಲಸ ಹೆಚ್ಚಿದ್ದಾಗ ಯಾವುದೇ ಮುಂದಾಲೋಚನೆ ಇಲ್ಲದೆ ಜನರನ್ನು ಬಾಡಿಗೆ ತೆಗೆದುಕೋಳ್ಳುವ ಈ ಕಂಪನಿಗಳು ಕೆಲಸ ಕಡಿಮೆ ಆದಾಗ ಅಥವಾ  ಭಾರತೀಯ ರೂಪಾಯಿಯ  ಮುಂದೆ ಅಮೇರಿಕೆಯ ಡಾಲರ್ ಬೆಲೆ ಕುಸಿದಾಗ (-ಇದರಿಂದ ಬರುವ ಆದಾಯ ಕಡಿಮೆ ಆಗುತ್ತದೆ. ಯಾಕೆಂದರೆ ಇಲ್ಲಿಯ ವ್ಯವಹಾರಗಳೆಲ್ಲ ನಡೆಯುವುದು ಡಾಲರ್ ನಲ್ಲಿ. ಡಾಲರ್ ಅಪಮೌಲ್ಯವಾದಾಗ ..)”Poor performer” ಎಂದು ಯಾವುದೇ ಮುಲಾಜಿಲ್ಲದೆ ಕೆಲಸದಿಂದ ಕಿತ್ತುಹಾಕಿ ಮನೆಗೆ ಕಳಿಸುವ ಸಾಫ್ಟ್ ವೇರ್ ಕಂಪನಿಗಳಿಗೆ ಲಂಗು-ಲಗಾಮೇ ಇಲ್ಲದಾಗಿರುವುದು ದೃಕ್-ಗೋಚರ. ಸರಕಾರದಿಂದ ಹಲವು ಸವಲತ್ತುಗಳನ್ನು ಪಡೆಯುವಾಗ ಇವುಗಳು ಸರಕಾರದ ಮುಂದೆ ‘ಜನರಿಗೆ ಉದ್ಯೋಗ ಕೊಡುತ್ತೇವೆ – ಇದರಿಂದ ದೇಶದ ಆಂತರಿಕ ಬೆಳವಣಿಗೆ ಸಾಧ್ಯ’ ಎನ್ನುತ್ತವೆ ಮತ್ತು ಸರಕಾರದಿಂದ ಕಡಿಮೆ ಬೆಲೆಯಲ್ಲಿ ಕೋಟ್ಯಾನುಕೋಟಿ ಬೆಲೆಯುಳ್ಳ ಜಮೀನನ್ನು ಪಡೆದು ಅದರಲ್ಲಿ ದೊಡ್ಡ ದೊಡ್ಡ ಇಮಾರತುಗಳನ್ನು ಕಟ್ಟುತ್ತವೆ. ಈ ರೀತಿ ಪಡೆದ ಜಮೀನಿನಲ್ಲಿ ಪೂಲ್,ಈಜುಕೋಳ ಇನ್ನಿತರ ಹಲವು ಸವಲತ್ತುಗಳನ್ನು ನೀಡಿ ತನ್ನ ಕ್ಯಾಂಪಸ್ ನಲ್ಲಿ ಕೆಲಸಮಾಡುವ ಸಫ್ಟ್ ವೇರ್ ಇಂಜಿನೀಯರುಗಳನ್ನೇ ಗುರಿಯಾಗಿಸಿಕೋಂಡು ವ್ಯಾಪಾರ ನಡೆಸುತ್ತವೆ ಎನ್ನುವುದೂ ಸತ್ಯವೇ. ಹೀಗೆ ನಮ್ಮನೆಲದಲ್ಲಿ ನಮ್ಮನ್ನೇ ಆಳುತ್ತ ಮನಸ್ಸಿಗೆ ಬಂದಂತೆ ಇಲ್ಲಿನ ಜನರನ್ನು ನಡೆಸಿಕೊಳ್ಳುತ್ತ – ಮೂರುಕಾಸಿನ ಸಂಬಳಕ್ಕೆ ನಮ್ಮ ಭಾರತೀಯ ಇಂಜಿನೀಯರುಗಳನ್ನು ದುಡಿಸಿಕೋಳ್ಳುತ್ತಿರುವ ಸಫ್ಟ್ ವೇರ್ ಕಂಪನಿಗಳಿಗೆ ಧಿಕ್ಕಾರವಿರಲಿ. ಭಾರತೀಯ ಸರಕಾರ ಇದರ ಮಧ್ಯ ಬಂದು ಈ ಎಲ್ಲದಕ್ಕು ಲಗಾಮು ಹಾಕಬೇಕಾಗಿದೆ.

೧. “Poor performer” ಎನ್ನುತ್ತರಲ್ಲಾ ಹಾಗಾದರೆ ಇವರು ಕೆಲಸಕ್ಕೆ ತೆಗೆದುಕೊಳ್ಳುವುದಕ್ಕೂ ಮೊದಲು ಇಂಟರ್ ವ್ಯು ತೆಗೆದುಕೊಳ್ಳುವುದು ಯಾಕೆ?
೨.  “Poor performer” ಅನ್ನು ಅಳೆಯುವ ಮಾಪನ ಯಾವುದು?
೩. ಒಂದೇಸಲಕ್ಕೆ ೧೦೦೦-೨೦೦೦ ಇಂಜಿನೀಯರುಗಳನ್ನು ಯಾವ ಆಧಾರದ ಮೇಲೆ “Poor performer” ಎನ್ನುತ್ತೀರಿ?
೪. ಒಮ್ಮೊಮ್ಮೆ ೫-೬ ವರ್ಷ ಕೆಲಸ ಮಾಡಿದವರನ್ನು ತೆಗೆಯುತ್ತಾರಲ್ಲ ಹಾಗಾದರೆ ಮೊದಲೆಲ್ಲಾ ಇವರು ಏನು ಮಾಡುತ್ತಿದ್ದರು?
೫. ಒಬ್ಬಿಬ್ಬರನ್ನು “Poor performer” ಎಂದು ತೆಗೆಯುವುದು ಸಹಜವೆನಿಸಬಹುದು ಆದರೆ ಒಮ್ಮೆಲೆ ೧೦೦೦-೨೦೦೦ ಜನರನ್ನು “Poor performer”  ಎಂದು      ಘೋಷಿಸುವುದು ಸತ್ಯಕ್ಕೆ ಎಷ್ಟು ಹತ್ತಿರ?
೬. ಅವರ ಭವಿಷ್ಯವೇನಾಗಬೇಕು?

 

-ಹೆಗಡೆ

Advertisements

3 thoughts on “ನಾವೇ ಮಾಡಿಕೊಂಡದ್ದು..ಇಂದಿನ ಸಾಫ್ಟ್ ಜಗತ್ತು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s