ನನ್ನ ಬುರ್ರಾ ಗಾಡಿಯನ್ನು ನಾನೇ ಕೊಂದದ್ದು..

ಬುರ್ರಾ ಗಾಡಿಯನೇರಿ...

ತಿಮ್ಮಣ್ಣಪ್ಪಚ್ಚಿ (ತಿಮ್ಮಣ್ಣ ಅಪ್ಪಚ್ಚಿ(ಚಿಕ್ಕಪ್ಪ))ಯ ಮಗ ಶ್ರೀಧರ “ಪುರ್ರ್..” ಎಂದು “ಮರದ ಹ್ಯಾಂಡಲ್” ಹಿಡಿದು ಅದನ್ನೇ ಬೈಕ್ ಎಂದು ಭಾವಿಸಿ ಅತಿವೇಗದಲ್ಲಿ ನಮ್ಮ ಹಳೆಯ ಮನೆ ಹಿತ್ತಲಾಕಡೆಯ ಅಡಿಕೆ ಮರಗಳ ಸಂದುಗೊಂದುಗಳನ್ನೆಲ್ಲಾ ಅಡ್ಡಾದಿಡ್ಡಿಯಾಗಿ ತಿರುಗುತ್ತ ನಮ್ಮ ಮನೆಯ ಅಂಗಳದಲ್ಲಿ ಲ್ಯಾಂಡ್ ಆದ. ಅವ ನನಗಿಂತ ಒಂದು ವರ್ಷಕ್ಕೆಲ್ಲಾ ದೊಡ್ಡವನು.  ಸಮಾನ ಮನಸ್ಕರು ನಾವು. ಕೋಲಿನ ಎರಡೂ ಬದಿಗೆ v ಅಕಾರದಲ್ಲಿ ಇನ್ನೆರಡು ಕೋಲನ್ನು ಕಟ್ಟಿದರೆ  ನಮ್ಮ “ಗಾಡಿ” ರೆಡಿ. ಅದಕ್ಕೆ ನಾವಿಟ್ಟ ಹೆಸರು “ಬುರ್ರಾ ಗಾಡಿ”.  ನಾ ಕೊಂದ ಬುರ್ರಾಗಾಡಿ...ಆ ದಿನಗಳಲ್ಲಿ ನಮ್ಮ ಹೆಚ್ಚಿನ ಲೊಕಲ್ ಪ್ರಯಾಣಗಳೆಲ್ಲಾ ಈ ಬುರ್ರಾಗಾಡಿಯಮೇಲೇ.. ಅದನ್ನು ಹಿಡಿದು “ಬುರ್ರ್ ರ್ರ್..” ಎಂದು ಬಾಯಲ್ಲಿ ಶಬ್ಢ ಮಾಡುತ್ತಾ ಓಡಿದರೆ ಮತ್ತೆ ನಿಲ್ಲುವುದು ನಮ್ಮ ಗುರಿ ತಲುಪಿದ ನಂತರವೆ. ನನಗೆ ಮತ್ತು ಮಳ್ಗೆ ಮನೆ ಯಂಟ್ರೋಣನಿಗೆ ಎಲ್ಲಿಗೆ ಹೋಗುವದಿದ್ದರೂ ಈ ಶ್ರೀಧರನೇ ಸಾಥಿ-ಸಾರಥಿ. “ಶ್ರೀಧರ ಸರ ಪರ ಟುರ್ರು ಟುಕ್ ಟುಕ್ ” .. ನಾನು ಮತ್ತು ಯೆಂಕಟಿ – ಶ್ರೀಧರನನ್ನ ಕಂಡಾಗಲೆಲ್ಲಾ ಇದನ್ನೇ ಹೇಳುತ್ತಿದ್ದೆವು. ಇಂದಿನ  ಚಲನಚಿತ್ರದ ಗೀತೆಗಳಂತೆ  ಅದಕ್ಕೇನೂ ಅರ್ಥವಿಲ್ಲದಿದ್ದರೂ ಪ್ರಾಸ ಮಾತ್ರವಿತ್ತು.

ಇವತ್ತು ನನ್ನ ಹಿರೊ ಹೋಂಡಾ ಬೈಕ್ ಅನ್ನು ಏರಿ ನನ್ನ ಆಫೀಸಿಗೆ ಹೊರಟಾಗ ಥಟ್ಟನೆ ನ್ನನ್ನ ಬೈಕ್ ಹ್ಯಾಂಡಲ್ ಮರವಾದಂತೆ ಭಾಸವಾಯಿತು.  ಹೆಲ್ಮೇಟಿನ ಒಳಗೇ “ಬುರ್ರ್ ರ್ರ್ ರ್ರ್ ರ್ರ್…..” ಎಂದಾಗ ಕಣ್ಣೆಲ್ಲ ಒದ್ದೆ ಒದ್ದೆ..  ಯಾಕೋ ಹೊಟ್ಟೆಯೆಲ್ಲಾ ತೊಳಸಿದಂತಾಯ್ತು. ನೆನಪಿನೆ ಆಳದಲ್ಲಿ ಮುಳುಗಿ ಹೋದೆ. ಗಟ್ಟಿಯಾಗಿ “ಶ್ರೀಧರ ಸರ ಪರ ಟುರ್ರ್ ಟುಕ್ ಟುಕ್..” ಎಂದೆ.. ಸಡನ್ನನೆ “ನಾನ್ಯಾಕೆ ಇಲ್ಲಿಗೆ ಬಂದೆ?? ಈ ಬೆಂಗಳೂರಿನಲ್ಲಿ ಬುರ್ರಾ ಗಾಡಿಯನ್ನು ಓಡಿಸುವಂತಾದನಲ್ಲಾ ! ” ಎಂದು ಯಾಕೋ ನನ್ನನ್ನೇ ನಾನು ಕೇಳಿಕೊಂಡಂತಾಯಿತು. ಬೆಂಗ್ಳೂರಿಗೆ ಬಂದ ನಂತರ ನನ್ನ ಹಳೆಯ ಬುರ್ರಾ ಗಾಡಿ ಸತ್ತು ಹೆಣವಾಗಿ ಹೋಯಿತಲ್ಲಾ ಎಂದು ಬೇಜಾರಾಯಿತು. ಒಮ್ಮೆ ನನ್ನ ಅಕ್ಕ ಪಕ್ಕ ನೋಡಿಕೊಂಡೆ. ಸಾವಿರಾರು “ಬುರ್ರಾ ಗಾಡಿಗಳು!” .. .. .. ಎಲ್ಲರೂ ತಮ್ಮ ಹಳೆಯ ಬಾಲ್ಯದ ಬುರ್ರಾ ಗಾಡಿಗಳನ್ನು ಕೊಂದ ಕೊಲೆಗಾರರೆ..  ಒಬ್ಬರಿಗೂ ತಾವು ಮಾಡಿದ ಕೊಲೆಯ ಪರಿವೆಯೇ ಇಲ್ಲ. ಎಲ್ಲಾ ಇಲ್ಲಿ ಬೆಂಗ್ಳೂರಿಗೆ ಬಂದು ತಮ್ಮ ತಮ್ಮ ಚಕ್ರಾಧಿಪತ್ಯವನ್ನು ಸ್ಥಾಪಿಸಿ ಆಗಿದೆ – ಇನ್ನು ಕೆಲವರು ಓಡುತ್ತಿದ್ದಾರೆ ಆ ಓಯಾಸಿಸ್ ಅನ್ನು ಅರಸಿ.

ಆದರೆ ನನಗೆ ಮತ್ತೆ ನನ್ನ ಹಳೆಯ ಬುರ್ರಾ ಗಾಡಿ ಬೇಕಾಗಿದೆ. ಯಂಟ್ರೋಣನಿಗೆ ಫೋನ್ ಮಾಡಿದೆ. ಅವನಲ್ಲಿ ಎನನ್ನೋ ಹೇಳಿಕೊಳ್ಳೊಣವೆನ್ನಿಸಿತು. ಮಾಡಿದರೆ ಅವನು ತನ್ನ ಹೊಚ್ಚ ಹೊಸ ಹೆಂಡತಿಯೊಂದಿಗೆ ಎಲ್ಲೋ ಹೊರಟು ನಿಂತಿದ್ದಾನೆ. ಹಾಗಾಗಿ ನನ್ನ ಮಾತು ಮಾತಾಡಲಿಲ್ಲ. ಇನ್ನು ಶ್ರೀಧರ ಎಲ್ಲಿದ್ದನೋ ಅದು ನಮ್ಮ ಮೂವರಲ್ಲಿ ಶ್ರೀಧರನಿಗೊಬ್ಬನಿಗೇ ಗೊತ್ತು. ಶ್ರೀಧರ ಸರ ಪರ ಟುರ್ರ್ ಟುಕ್ ಟುಕ್….

Advertisements

3 thoughts on “ನನ್ನ ಬುರ್ರಾ ಗಾಡಿಯನ್ನು ನಾನೇ ಕೊಂದದ್ದು..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s