ದೀಪಾವಳಿ – ಮಾತಾಡೊದು ವೇದಾಂತ – ತಿನ್ನೊದು ಸಗಣಿ

ನಮ್ಮ ಕಡೆ ಪುರಸೊತ್ತು ಸಿಕ್ಕಾಗ ಅಥವಾ ಮತಾಡಲು ಮಾತಿಲ್ಲದೇ ಹೋದಾಗ ಮತಾಡಲೆಂದೇ ಕೆಲವೊಂದಿಷ್ಟು ವಿಷಯಗಳಿವೆ – ಅಡಿಕೆ ರೇಟಿನ ಬಗ್ಗೆ  – ಮಳೆಯ ಬಗ್ಗೆ – ಧಾರಾವಾಹಿಯಬಗ್ಗೆ ಇವೇ ಇತ್ಯಾದಿ. ಇನ್ನು ಬೆಂಗಳೂರಿಗೆ ಬಂದರೆ ಇಲ್ಲಿ ಜನ ಹೆಚ್ಚಾಗಿ ಮಾತನಾಡುವುದು ಇಲ್ಲಿನ ಟ್ರಾಫ್ಫಿಕ್ಕಿನ (ವಾಹನ ದಟ್ಟಣೆ)ಬಗ್ಗೆ ಅಥವಾ ಇಲ್ಲಿನ ಪೊಲ್ಲ್ಯುಶನ್ (ಮಾಲಿನ್ಯದ)ಬಗ್ಗೆ . ಎಲ್ಲರೂ ಮತಾಡುತ್ತಾರೆ – ಈ ಮಾತುಗಳಿಗೆ  – ವಿಷಯಕ್ಕೆ  – ವಯಸ್ಸಿನ ನಿರ್ಬಂಧವಿಲ್ಲ – ಇಂಥದೇ ಸಮಯದಲ್ಲಿ ಮತನಾಡಬೇಕು ಎಂದಿಲ್ಲ. ಯಾರು ಬೇಕಾದರೂ ಮಾತನಾಡಬಹುದಾದದ್ದು. ಎಲ್ಲರಿಗೂ ಮುಕ್ತ. ಆದರೆ ಬೆಂಗಳೂರಿನ ಮಟ್ಟಿಗೆ ಯಾರಿಗೂ ಇದರಬಗ್ಗೆ ಒಳಗಿನಿಂದ ಕಾಳಜಿ ಇದ್ದಂತಿಲ್ಲ ಎನ್ನುವುದು ವಿಪರ್ಯಾಸ. ಪ್ರತಿಯೊಬ್ಬನಿಗೂ ಮಾತನಾಡಲು ಈ ಟ್ರಾಫ್ಫಿಕ್ಕು – ಪೊಲ್ಲ್ಯುಶನ್ನು ಬೇಕು ಆದರೆ ಕಳಜಿ ನಯಾ ಪೈಸೆಯದಿಲ್ಲ ಎಂಬುದಕ್ಕೆ ನಾನು ನೋಡಿದ ಈ ದೀಪಾವಳಿಯೇ ಸಾಕ್ಷಿ. ಈ ದೀಪಾವಳಿಯ ಮೂರು ದಿನ ಮಾತ್ರ ನನಗೆ ಇಡೀ ಬೆಂಗಳೂರಿನ ಮೇಲೆ ಸಿಟ್ಟು ಬಂದಿದೆ. ಹಬ್ಬದ ಅಚರಣೆ ತಪ್ಪಲ್ಲ – ಆದರೆ ನಮಗೆ ಒಂದು ಮಿತಿಯಿಲ್ಲ. ಅದೆಷ್ಟು ಜನ ಕಣ್ಣು – ಮೈ ಕೈ ಸುಟ್ಟುಕೊಂಡರೋ ಯಾರಿಗೂ ಲೆಕ್ಕವಿಲ್ಲ – ಇನ್ನೆಷ್ಟು ಕೋಟಿ ರೂಪಾಯಿಯ ಪಟಾಕಿ ಭೂದಿಯಾಯಿತೋ ದೇವರಿಗೇ ಗೊತ್ತು. ಅದಷ್ಟೂ ಬ್ರಹ್ಮ ದಂಡವೇ.

ಮಾತಾಡೊದು ವೇದಾಂತ – ತಿನ್ನೊದು ಸಗಣಿ ಅನ್ನೊಹಾಗೆ ನಾವು. ಮಾತಿಗೆ ಎನನ್ನೂ ಆಡುತ್ತೇವೆ – ಆದರೆ ನಾವು ಮಾಡುವ ತಪ್ಪಿನ ಅರಿವೇ ನಮಗಿಲ್ಲದಂತೆ ವರ್ತಿಸುವುದಿದೆಯಲ್ಲ ಅದು ವಿಪರ್ಯಾಸ. ಸುಮ್ಮನೆ ಪಟಾಕಿ ಹೊಡೆದು ಇನ್ನಷ್ಟು ಬಡವರಾಗಿದ್ದೇವೆ ಎನ್ನುವ ಅರಿವು ನಮ್ಮಲ್ಲಿ ಎಷ್ಟುಜನಕ್ಕಿದೆ? ಹಾನಿ ಕೇವಲ ನಮ್ಮ ಪರಿಸರಕ್ಕೆ ಮಾತ್ರವಲ್ಲ, ನಮ್ಮ ದೇಶಕ್ಕೂ ಕೂಡ. ಕೇವಲ ಬೆಂಗಳೂರೊಂದರಲ್ಲೆ ಸುಮರು ೫-೬ ಕೋಟಿ ಮದ್ದು – ಗುಂಡುಗಳನ್ನು ಸುಟ್ಟಿರಬಹುರದು ಅಥವಾ ಇನ್ನೆಷ್ಟೋ!! ಯಾರಿಗೂ ತಾವು ಮಾಡುವ ತಪ್ಪಿನ ಅರಿವೇ ಇಲ್ಲವೇ? ಅಥವಾ ಇನ್ಯಾವುದೋ ತಪ್ಪಿನ ಮುಂದೆ ಇದು ಚಿಕ್ಕದು ಎಂದು ಅನಿಸಿರಬಹುದೇ???

ನೀವೇ ಹೇಳಬೇಕು.

– ಶಿಶಿರ ಹೆಗಡೆ

Advertisements

2 thoughts on “ದೀಪಾವಳಿ – ಮಾತಾಡೊದು ವೇದಾಂತ – ತಿನ್ನೊದು ಸಗಣಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s