ಇದಲ್ಲವೆ ಕನ್ನಡ ಸೇವೆ..

ಅವನು ನಿಜವಾದ ಕನ್ನಡಿಗ… ಆತನ ದಿನ ಶುರುಆಗುವುದೇ ಪಿ.ಬಿ.ಶ್ರೀನಿವಸರ, ಘಂಠಸಾಲ್ ಅವರ ಸುಂದರ ಮಧುರ ಗೀತೆಗಳಿಂದ. ಆತ ಯಾರ ತೋರಿಕೆಗೆ ಕನ್ನಡವನ್ನು ಪ್ರೀತಿಸುತ್ತಿಲ್ಲ. ಆತನಲ್ಲಿ ಕನ್ನಡದ ಬಗ್ಗೆ ನಿಜವಾದ ಒಲವಿದೆ-ಮಮತೆ ಇದೆ, ಭಕ್ತಿ ಕೂಡ.
ಆತ ನನ್ನ ಕಂಪನಿಯ ಬಸ್ಸಿನ ಚಾಲಕ. ಈತನ ಕನ್ನಡ ಸೇವೆಯ ರೀತಿ ನನಗೆ ಬಹಳ ಖುಷಿ ತಂದಿತು.ಅದನ್ನೇ ಇಲ್ಲಿ ಪ್ರಸ್ತಾಪಿಸಲು ಹೊರಟಿದ್ದೇನೆ.ನಮ್ಮ ಬಸ್ಸಿನಲ್ಲಿ ಸುಮರು ೬೦% ಜನರು ಕನ್ನಡೇತರರು. ಬೆಳಿಗ್ಗೆ ಬಸ್ಸಿಗೆ ಹತ್ತಿದರೆ ನನಗೆ ಯವುದೋ ಅನ್ಯ ರಾಜ್ಯದ ಬಸ್ಸನ್ನು ಹತ್ತಿ ಹೊರಟ ಭಾಸವಾಗುತ್ತಿತ್ತು. ಇಂತಹ ಬಸ್ಸಿನಲ್ಲಿ ನಮ್ಮ ಚಾಲಕನದು ಒಂದು ಕನ್ನಡ ಸೇವೆ.ಈ ವಾತಾರವಣವನ್ನೆ ಬದಲಿಸಿದ ಹೆಮ್ಮೆ  ನಮ್ಮ  ಚಾಲಕನದು. ಎಲ್ಲರೂ ಕನ್ನಡ ಕೇಳಲೆ ಬೇಕು. ಆತ ಎಂದಿಗೂ ಬೆರೆ ಭಾಷೆಯ ಹಾಡನ್ನು ಹಚ್ಚಲಾರ.
ಪ್ರತೀ ದಿನವು ನಮ್ಮದು ಎರಡು ಘ್ಹಂಟೆಯ ಪ್ರಯಾಣ. ಮೊದಮೊದಲು ಅನ್ಯ ಭಾಷಾಸಂಭಾಷಣೆಗಳನ್ನು ಕೇಳುತ್ತಿದ್ದೆ ಆದರೆ ಈಗ ಎಲ್ಲವೂ ಮೌನ.ಪ್ರಯಾಣಗಳುದ್ದಕ್ಕೂ ಕನ್ನಡ ಚಿತ್ರಗೀತೆಗಳದೇ ಕಾರುಬಾರು. ಪ್ರತೀದಿನವೂ ಕೇವಲ ಕನ್ನಡ ಗೀತೆಗಳು. ನಾನೆ ಒಮ್ಮೆ ಕೇಳಿದೆ “ಯಾಕೆ ಸರ್ ಬರೀ ಕನ್ನಡ ಪದ್ಯಾನೆ ಹಚ್ತೀರಲ್ಲ?” ….”ಕಲೀಲಿ ಸರ್ ಕನ್ನಡಾನ..”

ಪ್ರಸ್ತುತ ಕನ್ನಡದಲ್ಲಿ ವ್ಯವಹರಿಸುವವರು ಬೆರಳೆಣಿಕೆ.ಈ ಸಂದರ್ಭದಲ್ಲಿ  ಎಲ್ಲೋ ಒಂದು ಹಾಸ್ಯ ನೆನಪಿಗೆ ಬರುತ್ತದೆ, – “ಬೆಂಗಳೂರಿನಲ್ಲಿ ಇಬ್ಬರು ತೆಲಗು ಅಥವ ತಮಿಳು ಮಾತನಾಡಿಕೊಳ್ಳುತ್ತಿದ್ದರೆ, ಅವರಲ್ಲಿ ಇಬ್ಬರೂ ಅನ್ಯ ಭಾಷಿಕರೇ ಇರುತ್ತಾರೆ ಅಥವಾ ಒಬ್ಬ ಕನ್ನಡಿಗ ಮತ್ತು ಒಬ್ಬ ಅನ್ಯ ಭಾಷಿಕ ಇರುತ್ತಾರಂತೆ. ಇಬ್ಬರು ಇಂಗ್ಲೀಷಿನಲ್ಲಿ ಮಾತನಾದುತ್ತಿದ್ದರೆ ಅವರಿಬ್ಬರು ಕನ್ನಡಿಗರೆ ಎನ್ನುವುದುರಲ್ಲಿ ಅನುಮಾನವಿಲ್ಲ, ಇನ್ನು ಅವರಿಬ್ಬರು ಕನ್ನಡದಲ್ಲಿ ಮಾತನಾಡುತ್ತಿದ್ದರೆ ಅವರು ಖಂಡಿತ ಬೆಂಗಳೂರಿಗೆ ಹೋಸಬರು. ಇದು ಅಕ್ಷರಶ: ಸತ್ಯ.” ಇದು ಬೆಂಗಳೂರಿನ ಪ್ರಸ್ತುತವಾಗಿರುವಾಗ ಕನ್ನಡಕ್ಕಾಗಿ ಎನಾದರೂ ಮಾಡಬೇಕೆಂಬ ಆಸೆ ಕೆಲವಾದರು ಕನ್ನಡಿಗರಲ್ಲಿ ಬಾರದೇ ಇರಲಿಕ್ಕಿಲ್ಲ.    ಇಂಥಹ ಒಂದು ರಾಜ್ಯದಲ್ಲಿ ಸಂಚರಿಸುವ ನಮ್ಮ ಬಸ್ಸು ಈ ವ್ರತ್ತದ ಹೊರಗೆ ಇರಲಿಲ್ಲ. ಹೀಗಿರುವಾಗ ಚಾಲಕನ ಕನ್ನಡ ಸೇವೆ ನಿಜವಾದ ಕನ್ನಡ ಸೇವೆಯೇ. ಇವತ್ತು ನಮ್ಮ ಬಸ್ಸಿನಲ್ಲಿ ಬರುವ ಎಲ್ಲರಿಗೂ ಹಲವು ಕನ್ನಡ ಚಿತ್ರಗೀತೆ ಬರುತ್ತದೆ. ಇದಲ್ಲವೆ ಕನ್ನಡ ಸೇವೆ..

Advertisements

3 thoughts on “ಇದಲ್ಲವೆ ಕನ್ನಡ ಸೇವೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s